ರಾಷ್ಟ್ರೀಯ

ಮದುವೆಯಾದ ಗಂಡಸರೇ ಹುಷಾರ್ ! ಏಕೆ ಅಂತೀರಾ ಇಲ್ಲಿ ಓದಿ !!

Pinterest LinkedIn Tumblr

6023marital-rape-530ಪತ್ನಿಯ ಒಪ್ಪಿಗೆ ಇಲ್ಲದೇ ಲೈಂಗಿಕ ಕ್ರಿಯೆ ನಡೆಸುವುದೂ ಮಹಿಳಾ ವಿರುದ್ಧ ನಡೆಯುವ ದೌರ್ಜನ್ಯವೇ ಆಗಿದ್ದು, ಇದನ್ನು ಅತ್ಯಾಚಾರವೆಂದು ಪರಿಗಣಿಸಬೇಕು ಎಂದು ಪಾಮ್ ರಾಜ್ಪೂತ್ ಸಮಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಹೌದು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಿಚಿತರು ನಡೆಸುವ ಅಪರಾಧವನ್ನು ಮಾತ್ರ ದೌರ್ಜನ್ಯ ಎಂದು ಪರಿಗಣಿಸುವುದು ಮಾತ್ರವಲ್ಲ, ಮದುವೆಯಾದ ಸ್ತ್ರೀಯು ತನ್ನ ಇಚ್ಛೆ ಇಲ್ಲದೇ ಪತಿ ನಡೆಸುವ ಲೈಂಗಿಕ ಚಟುವಟಿಕೆಗಳನ್ನೂ ಸಹ ದೌರ್ಜನ್ಯ ಎಂದೇ ಪರಿಗಣಿಸಬೇಕು ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ವೈವಾಹಿಕ ಅತ್ಯಾಚಾರ ಎಂಬುವುದು ಕೇವಲ ಪುರುಷನ ಕಾಮ ತೃಷೆ ತೀರಿಸಲು ಮಾತ್ರವಲ್ಲದೇ, ಹೆಣ್ಣಿನ ಮೇಲೆ ಅಧಿಕಾರ ಚಲಾಯಿಸಿ, ದಾಸ್ಯಕ್ಕೊಳಪಡುವಂತೆ ಮಾಡುತ್ತದೆ,ಎಂದು ಅಭಿಪ್ರಾಯಪತ್ತಿರುವ ಈ ವರದಿ  ತಿಳಿಸಿದ್ದು  ಸೋಮವಾರ ಮಹಿಳಾ ಪರ ಸಂಘಟನೆಗಳು, ಸರಕಾರೇತರ ಸಂಘಟನೆಗಳ ಉಪಸ್ಥಿತಿಯಲ್ಲಿ ನಡೆಯುವ ಮಹಿಳಾ ಅಭಿವೃದ್ಧಿ ಸಚಿವಾಲಯದ ಸಭೆಯಲ್ಲಿ ಚರ್ಚೆಗೆ ಬರಲಿವೆ.

1 Comment

Write A Comment