ರಾಷ್ಟ್ರೀಯ

ಮ್ಯಾಗಿ ಪರೀಕ್ಷೆ ಸರಿಯಾಗಿಲ್ಲ ಎಂದ ನೆಸ್ಲೆ !

Pinterest LinkedIn Tumblr

3872maggi-noodlesವಿಷಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧಕ್ಕೊಳಗಾಗಿರುವ ‘ಮ್ಯಾಗಿ’ಯನ್ನು ನೆಸ್ಲೆ ಇಂಡಿಯಾ ಕಂಪೆನಿ ಸಮರ್ಥಿಸಿಕೊಂಡಿದ್ದು ಸರ್ಕಾರಿ ಪ್ರಯೋಗಾಲಯದಲ್ಲಿ ಪ್ರಮುಖ ಪರೀಕ್ಷೆಯನ್ನು ನಡೆಸಲು ಸರಿಯಾದ ಉಪಕರಣಗಳು ಇಲ್ಲದಿರುವುದೇ ಮ್ಯಾಗಿ ನೂಡಲ್ಸ್ ಕುರಿತಾದ ತಪ್ಪು ಸಂದೇಶ ರವಾನೆಯಾಗಿದೆ ಎಂದು ತಿಳಿಸಿದೆ.

ಮುಂಬೈ ಹೈಕೋರ್ಟ್ ನಲ್ಲಿ ಮ್ಯಾಗಿ ಕಂಪೆನಿ ಪರ ವಕೀಲ ಮುಂಬೈ ಹೈಕೋರ್ಟ್ ನಲ್ಲಿ ವಾದ ಮಂಡಿಸಿ, ಪಶ್ಚಿಮ ಬಂಗಾಳ, ಪುಣೆ, ದೆಹಲಿಗಳಲ್ಲಿನ ಪ್ರಯೋಗಾಲಯಗಳಲ್ಲಿ ಸೀಸದ ಅಂಶವನ್ನು ಪರೀಕ್ಷಿಸುವಷ್ಟು ಪ್ರಯೋಗಾಲಯಗಳು ಉತ್ತಮ ಮಟ್ಟದಲ್ಲಿಲ್ಲ. ಅಲ್ಲದೇ  ಗುಜರಾತ್ ನ ವಡೋದರಾ, ರಾಜಕೋಟ್ ಮತ್ತು ಉತ್ತರಾಖಂಡ್ ರಾಜ್ಯಗಳ ಪ್ರಯೋಗಾಲಯಗಳಲ್ಲಿ ಲ್ಯಾಬ್ ಪರೀಕ್ಷೆಗೆ ಮಾನ್ಯತೆ ಇಲ್ಲ. ಅಷ್ಟೇ ಅಲ್ಲ, ಎರಡು ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ವಿಭಿನ್ನ ಫಲಿತಾಂಶ ಬಂದಿರುವುದೇ ಇದಕ್ಕೆ ಸಾಕ್ಷಿ ಎಂಬ ವಾದ ಮಂಡಿಸಿದರು.

ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದು, ಹಾಗಾಗಿ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ  ನೆಸ್ಲೆ ಕಂಪೆನಿ ನೂಡಲ್ಸ್ ತಯಾರಿಸುವಾಗ ಆಹಾರ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು  ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ  ನೆಸ್ಲೆ ಕಂಪೆನಿಯ 9 ನಮೂನೆಯ ನೂಡಲ್ಸ್ ಆಹಾರಗಳನ್ನುನಿಷೇಧಿಸಲಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.

Write A Comment