ರಾಷ್ಟ್ರೀಯ

ಅಪ್ರಾಪ್ತರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದವರ ಅರೆಸ್ಟ್

Pinterest LinkedIn Tumblr

2776arrest_200713-1ಗಾಜಿಯಾಬಾದ್: ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುತ್ತಿದ್ದ ಮೂವರ ತಂಡವನ್ನು ಬಂಧಿಸಿರುವ ಪೊಲೀಸರು ನಾಲ್ವರು ಬಾಲಕಿಯರನ್ನು ರಕ್ಷಿಸಿದ್ದಾರೆ.

ಅಪ್ತಾಪ್ತ ಬಾಲಕಿಯೊಬ್ಬಳು ಕಾಣೆಯಾದ ದೂರು ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆಕೆ ತನ್ನ ಬಳಿ ಇದ್ದ ಮೊಬೈಲ್ ಫೋನ್ ನಿಂದ ತನ್ನ ಪೋಷಕರಿಗೆ ಕರೆ ಮಾಡಿದ್ದ ವೇಳೆ ತಂತ್ರಜ್ಞಾನ ಬಳಸಿ ಆಕೆಯಿರುವ ತಾಣವನ್ನು ಪತ್ತೆ ಹಚ್ಚಿದ ಪೊಲೀಸರು ದೆಹಲಿಯ ದಾಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸೀತಾಪುರಿ ಕಾಲೋನಿ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಈ ಜಾಲದ ಸದಸ್ಯರು ಸಿಕ್ಕಿ ಬಿದ್ದಿದ್ದಾರೆ.

ರಾಜು, ಅಜಯ್ ಮತ್ತು ರಾಜನ್ ಎಂಬ ಮೂವರನ್ನು ಬಂಧಿಸಿರುವ ಪೊಲೀಸರು ಅವರುಗಳು ವೇಶ್ಯಾವಾಟಿಕೆಗೆ ದೂಡಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ. ಈ ಪೈಕಿ ಮೂವರು ಬಾಲಕಿಯರ ಪೋಷಕರನ್ನು ಸಂಪರ್ಕಿಸಿರುವ ಪೊಲೀಸರು ಬಾಲಕಿಯರನ್ನು ಅವರುಗಳ ವಶಕ್ಕೆ ನೀಡಲು ಮುಂದಾಗಿದ್ದಾರೆ.

Write A Comment