ರಾಷ್ಟ್ರೀಯ

ನನ್ನನ್ಯಾರೂ ರೇಪ್ ಮಾಡಿಲ್ಲ ಅಂತಿದ್ದಾಳೆ ಈ ಜರ್ಮನ್ ಯುವತಿ

Pinterest LinkedIn Tumblr

338208-1ಅಹ್ಮದಾಬಾದ್: ಕಾರ್ಯವೊಂದರ ನಿಮಿತ್ತ ಭಾರತಕ್ಕೆ ಬಂದಿರುವ 19 ವರ್ಷದ ಜರ್ಮನ್ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ಹೇಳುತ್ತಿದ್ದರೂ ಪೊಲೀಸರು ಮಾತ್ರ ಆಕೆಯ ಹೇಳಿಕೆಯನ್ನು ಒಪ್ಪಲು ಸುತರಾಂ ಸಿದ್ದರಿಲ್ಲ. ಅದೇಕೆ ಅಂತೀರಾ ಈ ಸ್ಟೋರಿ ಓದಿ.

ಕಳೆದ 10 ತಿಂಗಳಿನಿಂದ ಅಹ್ಮದಾಬಾದಿನಲ್ಲಿ ವಾಸ್ತವ್ಯ ಹೂಡಿರುವ ಈ ಯುವತಿ ಜುಲೈ 9 ರಂದು ತನ್ನ ಸ್ನೇಹಿತೆ ಪೌಲಾ ಎಂಬಾಕೆಯ ಹುಟ್ಟು ಹಬ್ಬದ ಪಾರ್ಟಿ ಆಚರಿಸಲು ವಡೋದರಾ ಹೊರ ವಲಯದ ಫಾರ್ಮ್ ಹೌಸ್ ಒಂದಕ್ಕೆ ತೆರಳಿದ್ದಾಳೆ. ಅಲ್ಲಾಗಲೇ 20 ಕ್ಕೂ ಅಧಿಕ ಯುವಕ- ಯುವತಿಯರು ಸೇರಿದ್ದಾರೆ. ಅಲ್ಲಿ ತಂಪು ಪಾನೀಯ ಕುಡಿದ ಆಕೆ ಪ್ರಜ್ಞಾಹೀನಳಾಗಿದ್ದಳೆಂದು ಹೇಳಲಾಗಿದೆ.

ಎಚ್ಚರಾದ ಬಳಿಕ ತನ್ನ ಬಟ್ಟೆ ಅಸ್ತವ್ಯಸ್ತವಾಗಿರುವುದನ್ನು ಗಮನಿಸಿ ಗಲಿಬಿಲಿಗೊಂಡಿದ್ದಾಳೆ. ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ಯುವತಿಯನ್ನು ಆಕೆಯ ಸ್ನೇಹಿತನೊಬ್ಬ ವೈದ್ಯ ಯೋಗೀಶ್ ಪಟೇಲ್ ಎಂಬವರ ಬಳಿ ಕರೆದುಕೊಂಡು ಹೋಗಿದ್ದಾನೆ. ಆಕೆಯ ಹೇಳಿಕೆ ಪಡೆದ ವೈದ್ಯರು ಅತ್ಯಾಚಾರ ಪ್ರಕರಣವಿರಬಹುದೆಂಬ ಕಾರಣಕ್ಕೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಆದರೆ ಯುವತಿ ಪೊಲೀಸರಿಗೆ ಈ ಕುರಿತು ಯಾವುದೇ ದೂರು ನೀಡಿಲ್ಲ. ಮಹಿಳಾ ವೈದ್ಯೆಯೊಬ್ಬರಿಂದ ಆಕೆಯ ಬಾಯ್ ಫ್ರೆಂಡ್ ಸಮ್ಮುಖದಲ್ಲೇ ಕೌನ್ಸೆಲಿಂಗ್ ನಡೆಸಲಾಗಿದೆ. ಸುದ್ದಿ ಮಾಧ್ಯಮಗಳಲ್ಲಿ ಜರ್ಮನ್ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ವರದಿ ಪ್ರಕಟಗೊಂಡ ನಂತರ ತನ್ನ ವಕೀಲರ ಜೊತೆ ಖುದ್ದು ಠಾಣೆಗೆ ಬಂದ ಯುವತಿ ತನ್ನ ಮೇಲೆ ಯಾರೂ ಅತ್ಯಾಚಾರವೆಸಗಿಲ್ಲವೆಂಬ ಹೇಳಿಕೆ ನೀಡಿದ್ದಾಳೆ. ಆದರೆ ವೈದ್ಯರು ಆಕೆ ಕೌನ್ಸೆಲಿಂಗ್ ವೇಳೆ ನೀಡಿದ ಹೇಳಿಕೆ ಕಾರಣಕ್ಕಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಅದರ ದಾಖಲೆಗಳನ್ನೂ ನೀಡಲು ಸಿದ್ದ ಎಂದಿದ್ದಾರೆ. ಈಗ ಯುವತಿಯೇ ಖುದ್ದು ಬಂದು ತನ್ನ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ಹೇಳಿಕೆ ನೀಡಿರುವ ಕಾರಣ ಪ್ರಕರಣ ದಾಖಲಿಸದಿರಲು ಪೊಲೀಸರು ನಿರ್ಧರಿಸಿದ್ದಾರೆ.

Write A Comment