ಅಂತರಾಷ್ಟ್ರೀಯ

ಸೆಲ್ಫಿ ತೆಗೆದು ಜೈಲು ಪಾಲಾದ ಯುವಕ

Pinterest LinkedIn Tumblr

1868selfieಸ್ಮಾರ್ಟ್ ಫೋನ್ ಬಂದ ಮೇಲೆ ಸೆಲ್ಫಿ ಹುಚ್ಚು ಹೆಚ್ಚಿದೆ. ಅದರಲ್ಲಿಯೂ ಕೆಲವರಿಗೆ ಯಾವ ಜಾಗದಲ್ಲಿ ಸೆಲ್ಫಿ ತೆಗೆಯಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸೆಲ್ಫಿ ತೆಗೆದ ಲಂಡನ್ ನ ಯುವಕನೊಬ್ಬ ಜೈಲು ಪಾಲಾದ ಘಟನೆ ನಡೆದಿದೆ.

ಹೌದು. ಉತ್ತರ ಲಂಡನ್‌ನ ಬಾರ್ನೆಟ್‌ ನಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದ್ದರು. ಅಲ್ಲದೇ ಅಪಘತಾದಿಂದ ನಜ್ಜುಗುಜ್ಜಾಗಿದ್ದ ಕಾರಿನಲ್ಲಿದ್ದ ಡ್ರೈವರ್‌ ಮತ್ತು ಇಬ್ಬರು ಪ್ರಯಾಣಿಕರನ್ನು ಹೊರಗೆಳೆಯಲು  ಸಾಕಷ್ಟು ಪರಿಶ್ರಮ ಪಡಬೇಕಾಯಿತು.

ಆದರೆ ಈ ಸಮಯದಲ್ಲಿ ಯುವಕನೊಬ್ಬ ಯಾವುದೇ ಅರಿವಿಲ್ಲದೇ ವಿವಿಧ ಭಂಗಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಇದರಿಂದ ಆಕ್ರೋಶಗೊಂಡ ಅಧಿಕಾರಿಗಳು ಆತನ ಮೇಲೆ ಕಾರ್ಯಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಿದ್ದಾರೆ.

Write A Comment