ಮನೋರಂಜನೆ

‘ಬಾಹುಬಲಿ’ ಯ ಮೊದಲ ಐದು ದಿನದ ಗಳಿಕೆ ಕೇಳಿದ್ರೆ ದಂಗಾಗ್ತೀರಿ !

Pinterest LinkedIn Tumblr

5284IndiaTv6d5113_baahubaliಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಮೇಲೆ ದಾಖಲೆ ಮಾಡುತ್ತಿದ್ದು, ಈಗ ‘ಬಾಹುಬಲಿ’ ಕಿರೀಟಕ್ಕೆ ಮತ್ತೊಂದು ಹೊಸ ದಾಖಲೆ ಸೇರ್ಪಡೆಯಾಗಿದೆ.

ಜುಲೈ 10 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಮೊದಲ ಐದು ದಿನಗಳಲ್ಲೇ 215 ಕೋಟಿ ರೂ. ಗಳನ್ನು ಗಳಿಸಿದ್ದು, ಭಾರತೀಯ ಚಿತ್ರವೊಂದು ಅತ್ಯಲ್ಪ ಅವಧಿಯಲ್ಲಿಯೇ ‘200 ಕೋಟಿ ಕ್ಲಬ್’ ಗೆ ಸೇರಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ವಾರದ ದಿನಗಳಲ್ಲೂ ಗಳಿಕೆಯಲ್ಲೇನು ಹಿಂದೆ ಬಿದ್ದಿಲ್ಲ.

ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಮುಖ್ಯ ಭೂಮಿಕೆಯಲ್ಲಿರುವ ‘ಬಾಹುಬಲಿ’ ಚಿತ್ರ 250 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದೆ ಎನ್ನಲಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ಮೂರ್ನಾಲ್ಕು ದಿನಗಳಲ್ಲೇ ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಾಸ್ ಬರಲಿದೆ ಎನ್ನಲಾಗುತ್ತಿದೆ. ವಿದೇಶಗಳಲ್ಲೂ ‘ಬಾಹುಬಲಿ’ ಭರ್ಜರಿ ಗಳಿಕೆ ಮಾಡಿದ್ದು, ಈ ಹಿಂದೆ ಯಶಸ್ಸು ಗಳಿಸಿದ್ದ ಬಾಲಿವುಡ್ ಚಿತ್ರಗಳಾದ ‘ಹ್ಯಾಪಿ ನ್ಯೂ ಇಯರ್’ ಹಾಗೂ ‘ಪಿಕೆ’ ಚಿತ್ರವನ್ನು ‘ಬಾಹುಬಲಿ’ ಹಿಂದಿಕ್ಕಿದೆ.

Write A Comment