ರಾಷ್ಟ್ರೀಯ

ಕುಡಿದು ಕುಪ್ಪಳಿಸುತ್ತಿದ್ದ ಯುವತಿಯರು ಸೇರಿದ್ದು ಜೈಲಿಗೆ

Pinterest LinkedIn Tumblr

articleಕುಡಿದ ಮತ್ತಿನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ 17 ಮಂದಿ ಯುವತಿಯರೂ ಸೇರಿದಂತೆ 32 ಜನರು ಪೊಲೀಸರ ಅತಿಥಿಯಾದ ಘಟನೆ ಮುಂಬೈನ ಥಾನೆಯಲ್ಲಿ ನಡೆದಿದೆ.

ಇಲ್ಲಿನ ಉಲ್ಲಾಸ್‌ನಗರದ ಟ್ರಾಕ್‌ನಂಬರ್-3ರಲ್ಲಿರುವ ವರ್ಷಾ ಬಾರ್ ಹಾಗೂ ರೆಸ್ಟೋರೆಂಟ್ ನಲ್ಲಿ ಪಾರ್ಟಿಯೊಂದು ಆಯೋಜನೆಯಾಗಿತ್ತು. ಇಲ್ಲಿಗೆ ಬಂದ ಯುವಕರು ಕುಡಿದ ಮತ್ತಿನಲ್ಲಿ ಯುವತಿಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಈ ರೆಸ್ಟೋರೆಂಟ್ ಸಹ ಅನಧಿಕೃತವಾಗಿ ನಡೆಯುತ್ತಿತ್ತು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು17 ಯುವತಿಯರು ಸೇರಿ 32 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ದಾಳಿಯ ಸಮಯದಲ್ಲಿ 40 ಸಾವಿರ ರೂಪಾಯಿಗಳ ನಗದನ್ನು ವಶಪಡಿಸಿಕೊಳ್ಳಲಾಗಿದ್ದು ಕಾನೂನು ಮೀರಿ ರೆಸ್ಟೋರೆಂಟ್ ನಡೆಸುತ್ತಿದ್ದ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment