ರಾಷ್ಟ್ರೀಯ

ಎರಡು ಕಾಮದ ಅಡ್ಡೆಗಳ ಮೇಲೆ ರೈಡ್

Pinterest LinkedIn Tumblr

9316Sex-racket-Urvaಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ದಂಧೆಗಳು ಎಗ್ಗಿಲ್ಲದೇ ಸಾಗಿದ್ದು ಇದಕ್ಕೆ ನಿದರ್ಶನವೆಂಬಂತೆ ಎರಡು ಪ್ರತ್ಯೇಕ ವೇಶ್ಯಾವಾಟಿಕೆ ಕೇಂದ್ರಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಎಂಟು ಮಂದಿ ಹೊರರಾಜ್ಯದ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಚಂದ್ರಾ ಲೇಯೌಟ್ ನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಒಬ್ಬ ನೇಪಾಳಿ ಹಾಗೂ ಪಂಜಾಬ್ ಮೂಲದ ನಾಲ್ವರು ಯುವತಿಯರನ್ನು ರಕ್ಷಿಸಿ ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮಾಯಕ ಯುವತಿಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಪಿಗಳು ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎನ್ನಲಾಗಿದ್ದು ಈ ಸಂಬಂಧ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ಪೈ ಲೇಯೌಟ್ ನ ಮನೆಯೊಂದನ್ನು ಬಾಡಿಗೆ ಪಡೆದಿದ್ದ ವಿಷ್ಣು ಹಾಗೂ ಸುಮಂತ್ ಎಂಬಿಬ್ಬರು ಹೊರರಾಜ್ಯದ ಯುವತಿಯರನ್ನು ಕರೆಯಿಸಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಮನೆಗೆ ನಡೆಸಿದ ದಾಳಿಯಲ್ಲಿ ಕೊಲ್ಕತ್ತಾ ಮೂಲದ ಮೂವರು ಯುವತಿಯರನ್ನು ರಕ್ಷಿಸಲಾಗಿದ್ದು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮಹಾದೇವ ಪುರದ ಪೊಲೀಸರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Write A Comment