ರಾಷ್ಟ್ರೀಯ

ತ್ವಚೆಯ ಕಾಂತಿ ಹೆಚ್ಚಿಸಲು ಆಯ್ಲ್ ಬಾತ್ !

Pinterest LinkedIn Tumblr

19886328crude-oil-bathಇತ್ತೀಚೆಗೆ ದೇಹದ ಸೌಂದರ್ಯ ಹೆಚ್ಚಿಸಲು ತರಹೇವಾರಿ ಪ್ರಯೋಗ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದರಲ್ಲಿಯೂ ಇತ್ತೀಚೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ವಿವಿಧ ಸೌಂಧರ್ಯ ವರ್ಧಕಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಆದರೆ ತೈಲ ಉತ್ಪಾದನೆ ಮಾಡುವ ಅಜರ್‍ಬೈಜಾನ್‍ನಲ್ಲಿ ಜನ ದೇಹದ ಕಾಂತಿ ವೃದ್ಧಿಸಲು ಕಚ್ಚಾ ತೈಲದ ಸ್ನಾನ ಮಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ಹೌದು. ಅಜರ್‍ಬೈಜಾನ್ ನ್ಯಾಫ್ಟಲ್ಯಾನ್ ಎಂಬಲ್ಲಿ ಕಚ್ಚಾ ತೈಲ ಸ್ನಾನ ಸ್ಪಾ ಸೆಂಟರ್ ಇದ್ದು. ಜನ ಇಲ್ಲಿಗೆ ಆಗಮಿಸಿ ಕಚ್ಚಾ ತೈಲದ  ಟಬ್‍ನಲ್ಲಿ ವಿವಸ್ತ್ರರಾಗಿ ಮುಳುಗಿಸಿ ಸ್ನಾನ ಮಾಡಿಸುತ್ತಾರೆ. ಇದರಿಂದ ಚರ್ಮದ ಕಾಂತಿ ಹೆಚ್ಚಿ ಆರೋಗ್ಯ ಸುಧಾರಿಸುತ್ತದೆ ಎಂಬುದು ಇಲ್ಲಿಯವರ ನಂಬಿಕೆ.

ವಿಶೇಷವೆಂದರೆ  6ನೇ ಶತಮಾನದಿಂದ ಈ ಕಚ್ಚಾ ತೈಲದ ಸ್ನಾನ ಆರಂಭವಾಗಿದ್ದು  ಮೊದ ಮೊದಲು  ಒಂಟೆಗಳು ಆರೋಗ್ಯವಾಗಿರಲು ಈ ರೀತಿಯ ಸ್ನಾನ ಮಾಡಿಸುತ್ತಿದ್ದರಂತೆ. ಅದೇ ಮುಂದುವರಿದು ನಂತರ ಜನರು ಸಹ ಕಚ್ಚಾ ತೈಲದಲ್ಲಿ ಸ್ನಾನ ಮಾಡಲು ಮುಂದಾದರಂತೆ.

ಅಲ್ಲಿಯ ಜನರ ಪ್ರಕಾರ ನರ ರೋಗ, ಚರ್ಮ ಸಂಬಂಧಿ ರೋಗ ಸೇರಿದಂತೆ ಒಟ್ಟು 70 ಬಗೆಯ ರೋಗಗಳು ಇದರಿಂದ ವಾಸಿ ಆಗುತ್ತದೆಯಂತೆ. ಈ ಸ್ನಾನವನ್ನು ಶ್ರೀಮಂತ ಉದ್ಯಮಿಗಳು ಹೆಚ್ಚಾಗಿ ಮಾಡುತ್ತಿದ್ದು, ಒಂದು ಬಾರಿ ಸ್ನಾನಕ್ಕೆ 20 ಸಾವಿರ ರೂಪಾಯಿ ಚಾರ್ಜ್ ಆಗುತ್ತದೆ.

Write A Comment