ರಾಷ್ಟ್ರೀಯ

ಮಿಂಚಿನಂತೆ ಹರಿದಾಡುತ್ತಿದೆ ವೈದ್ಯೆ ಮೇಲೆ ಸಚಿವ ಕೈ ಹಾಕಿದ ಚಿತ್ರ

Pinterest LinkedIn Tumblr

2861doctor_647_063015063545

ಜಮ್ಮು ಕಾಶ್ಮೀರ: ಅಧಿಕಾರಕ್ಕೆ ಬಂದಾಗಿನಿಂದಲೂ ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿರುವ ಜಮ್ಮು ಕಾಶ್ಮೀರ ಸರ್ಕಾರದ ಆರೋಗ್ಯ ಸಚಿವ ಚೌಧರಿ ಲಾಲ್ ಸಿಂಗ್ ಈಗ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆ ಭೇಟಿಗಾಗಿ ಇತ್ತೀಚೆಗೆ ಲಖನ್ ಪುರ್ ಗೆ ತೆರಳಿದ್ದ ಚೌಧರಿ ಲಾಲ್ ಸಿಂಗ್, ಅಲ್ಲಿನ ಯುವ ವೈದ್ಯೆಯೊಬ್ಬಳ ಮೇಲೆ ಸಾರ್ವಜನಿಕವಾಗಿ ಕೈ ಹಾಕಿದ್ದು, ಇದರ ಫೋಟೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಮಿಂಚಿನಂತೆ ಹರಿದಾಡುವ ಮೂಲಕ ಸಚಿವರ ಲಜ್ಜೆಗೇಡಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹಿಂದೆಯೂ ಸಚಿವ ಚೌಧರಿ ಲಾಲ್ ಸಿಂಗ್, ಮಹಿಳಾ ವೈದ್ಯೆಯೊಬ್ಬರ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ಈ ಕುರಿತು ಆಕೆ ದೂರನ್ನೂ ಸಹ ನೀಡಿದ್ದಾರೆ. ಈ ಮಹಿಳಾ ವೈದ್ಯೆ ಕೋಟ್ ಧರಿಸದ್ದನ್ನು ಪ್ರಶ್ನಿಸಿದ್ದ ಸಚಿವರು ತರಾಟೆಗೆ ತೆಗೆದುಕೊಂಡಿದ್ದರು. ತಾನು ಮನೋವೈದ್ಯೆಯಾಗಿರುವ ಕಾರಣ ಮಾನಸಿಕ ರೋಗಿಗಳೊಂದಿಗೆ ಸಹಜವಾಗಿ ವರ್ತಿಸಲು ಕೋಟ್ ಧರಿಸಿಲ್ಲವೆಂದು ವೈದ್ಯೆ ಉತ್ತರ ನೀಡಿದ್ದರೂ ಅದನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದ ಸಚಿವರು, ನಿನ್ನ ಕೆಲಸ ಮುಗಿಯಿತು. ಇನ್ನು ಇಲ್ಲಿಂದ ಹೊರಡು ಎಂಬ ಬೆದರಿಕೆಯನ್ನೂ ಹಾಕಿದ್ದರು. ಈಗ ಯುವ ವೈದ್ಯೆಯೊಬ್ಬಳ ಮೇಲೆ ಸಾರ್ವಜನಿಕವಾಗಿಯೇ ಕೈ ಹಾಕುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

Write A Comment