ರಾಷ್ಟ್ರೀಯ

80 ಸಾವಿರ ವಿದ್ಯಾರ್ಥಿಗಳು ಫೇಲ್ ಆಗಿದ್ದಕ್ಕೆ ಕಾರಣ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಿ

Pinterest LinkedIn Tumblr

1251Schoolkids_India_AFPಪಂಜಾಬ್: ಈ ಬಾರಿಯ 10 ನೇ ತರಗತಿ ಪರೀಕ್ಷೆಯಲ್ಲಿ 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಂಗ್ಲೀಷ್ ವಿಷಯದಲ್ಲಿ ಫೇಲ್ ಆಗಿರುವುದರ ಕಾರಣ ಕಂಡು ಹಿಡಿಯಲು ಹೋದ ಪಂಜಾಬ್ ಶಿಕ್ಷಣ ಸಚಿವರಿಗೆ ಶಾಕ್ ಆಗಿದೆ.

ಪಂಜಾಬ್ ರಾಜ್ಯದ 10 ನೇ ತರಗತಿ ಪರೀಕ್ಷಾ ಫಲಿತಾಂಶ ಬಂದ ಬಳಿಕ ಬೃಹತ್ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಇಂಗ್ಲೀಷಿನಲ್ಲಿ ಫೇಲ್ ಆಗಿದ್ದರಿಂದ ಇದಕ್ಕೆ ಕಾರಣವೇನಿರಬಹುದೆಂದು ಶಿಕ್ಷಣ ಸಚಿವ ದಲ್ಜೀತ್ ಸಿಂಗ್ ಚೀಮಾ ಶಿಕ್ಷಕರಿಂದಲೇ ಉತ್ತರ ಬಯಸಿದ್ದರು. ಇದಕ್ಕೆ ಶಿಕ್ಷಕರು ನೀಡಿದ ಉತ್ತರ ಕಂಡು ಸಚಿವರು ಹೌಹಾರಿ ಹೋಗಿದ್ದಾರಲ್ಲದೇ ಕಳಪೆ ಫಲಿತಾಂಶಕ್ಕೆ ಉತ್ತರವನ್ನೂ ಕಂಡುಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಬೋಧಿಸಬೇಕಾದ ಶಿಕ್ಷಕರೇ ಆ ಕುರಿತು ಜ್ಞಾನವನ್ನೇ ಹೊಂದಿಲ್ಲವೆಂಬ ಅಂಶವೂ ಈ ವೇಳೆ ಬಯಲಾಗಿದೆ. ಇದರಿಂದ ಕೆಂಡಾಮಂಡಲಗೊಂಡಿರುವ ಸಚಿವ ಚೀಮಾ, ಶಿಕ್ಷಕರುಗಳಿಗೆ ಛೀಮಾರಿ ಹಾಕಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿಗಳು ಫೇಲ್ ಆಗಿರುವುದಕ್ಕೆ ಶಿಕ್ಷಕರು ನೀಡಿರುವ ಕಾರಣಗಳ ಪಟ್ಟಿ ಇಲ್ಲಿದೆ ನೋಡಿ. ಓದಿದರೆ ನಿಮಗೆ ನಗು ಬರುವುದರ ಜೊತೆಗೆ ಇಂತಹ ಶಿಕ್ಷಕರಿಂದ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಗಳ ಭವಿಷ್ಯದ ಕುರಿತೂ ವ್ಯಥೆಯಾಗುತ್ತದೆ.

‘Leak of interest’;
‘English are international languages so no interest’;
‘Staff of our school were vacant…our school has situated remote area’;
‘Student mental level are not well in these syllabus’;
‘It class was very weak from 6 by chance’;
‘teachers under pressure of other work, so no time study’.

Write A Comment