ಮನೋರಂಜನೆ

ಈ ಬಾಲಿವುಡ್ ನಟಿ ಯಾರು ಬಲ್ಲಿರೇನು..?

Pinterest LinkedIn Tumblr

7085rishi-kapoor

ಮುಂಬೈ: ಹಿರಿಯ ಬಾಲಿವುಡ್ ನಟರೊಬ್ಬರು ತಮ್ಮ ಯಶಸ್ವಿ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಿದ್ದಾಕೆಯನ್ನೇ ಗುರುತು ಹಿಡಿಯದೇ ಮುಜುಗರಕ್ಕೊಳಗಾದ ಘಟನೆ ನಡೆದಿದೆ.

ರಿಷಿ ಕಪೂರ್ ತಮ್ಮೊಂದಿಗೆ ನಟಿಸಿದ್ದ ಮೀನಾಕ್ಷಿ ಶೇಷಾದ್ರಿಯವರನ್ನು ಗುರುತು ಹಿಡಿಯಲು ವಿಫಲವಾಗಿದ್ದು, ಇವರಿಬ್ಬರ ಅಭಿನಯದ ‘ದಾಮಿನಿ’ ಚಿತ್ರ ಅತ್ಯಂತ ಯಶಸ್ವಿಯಾಗಿತ್ತಲ್ಲದೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದಾದ ಬಳಿಕ ಈ ಜೋಡಿ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದು ಬಾಲಿವುಡ್ಡಿನ ಯಶಸ್ವಿ ಜೋಡಿಗಳ ಪೈಕಿ ಒಂದೆಂದು ಪರಿಗಣಿತವಾಗಿತ್ತು.

ವಿವಾಹವಾದ ಬಳಿಕ ಬಾಲಿವುಡ್ ಚಿತ್ರರಂಗ ತೊರೆದಿದ್ದ ಮೀನಾಕ್ಷಿ ಶೇಷಾದ್ರಿ ಪತಿಯೊಂದಿಗೆ ಅಮೆರಿಕಾದಲ್ಲಿ ನೆಲೆ ನಿಂತಿದ್ದರು. ಇತ್ತೀಚೆಗೆ ಮುಂಬೈಗೆ ಆಗಮಿಸಿದ್ದ ಅವರು ತಮ್ಮ ಚಿತ್ರಗಳಲ್ಲಿ ನಾಯಕರಾಗಿದ್ದ ರಿಷಿ ಕಪೂರ್ ಅವರನ್ನು ನೋಡಲು ಅವರ ನಿವಾಸಕ್ಕೆ ತೆರಳಿದ್ದಾರೆ.

ಆದರೆ ರಿಷಿ ಕಪೂರ್ ಅವರಿಗೆ ಮೊದಲು ಆಕೆಯ ಗುರುತೇ ಸಿಗಲಿಲ್ಲವಂತೆ. ಇದನ್ನು ಅವರೇ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದು, ಮೀನಾಕ್ಷಿ ಶೇಷಾದ್ರಿ ಬಂದ ವೇಳೆ ಆಕೆಯೊಂದಿಗೆ ತೆಗೆಸಿಕೊಂಡಿದ್ದ ಚಿತ್ರವೊಂದನ್ನು ಟ್ವಿಟ್ಟರಿನಲ್ಲಿ ಹಾಕಿ ಇವರು ಯಾರೆಂದು ಗುರುತಿಸಿ ಎಂದು ತಮ್ಮ ಫಾಲೋವರ್ಸ್ ಗಳಿಗೆ ಕೇಳಿದ್ದಾರೆ. ಮೀನಾಕ್ಷಿ ಶೇಷಾದ್ರಿ ಬಹಳಷ್ಟು ಬದಲಾಗಿರುವ ಕಾರಣ ತಾವು ಗುರುತಿಸುವಲ್ಲಿ ವಿಫಲವಾಗಿದ್ದಾಗಿ ಹೇಳಿರುವ ರಿಷಿ ಕಪೂರ್, ಆಕೆ ಈಗ ಇನ್ನಷ್ಟು ಸುಂದರಳಾಗಿದ್ದಾಳೆ ಎಂದಿದ್ದಾರೆ.

Write A Comment