ರಾಷ್ಟ್ರೀಯ

ದೆಹಲಿ ಸರ್ಕಾರದ ಬಳಿ ರು.19,000 ಕೋಟಿ ಬಳಕೆ ಬಗ್ಗೆ ದಾಖಲೆ ಇಲ್ಲ: ಸಿಎಜಿ

Pinterest LinkedIn Tumblr

moneyನವದೆಹಲಿ: ಹಲವಾರು ಯೋಜನೆಗಳ ಅನುಷ್ಠಾನ ಸಂಬಂಧ ಬಿಡುಗಡೆ ಮಾಡಲಾಗಿದ್ದ ರು.19 ಸಾವಿರ ಕೋಟಿ ಬಗ್ಗೆ ದೆಹಲಿ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂಬುದನ್ನು ಲೇಖಪಾಲರು ಮತ್ತು ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿ ಹೇಳಿದೆ.

ಮಾರ್ಚ್, 2013ರವರೆಗೆ 5,235 ಅನುದಾನ ಬಿಡುಗಡೆ ಸಂಬಂಧ ರು. 26,434 ಕೋಟಿಗಳನ್ನು ನೀಡಲಾಗಿತ್ತು. ಆದರೆ 4,784 ಅನುದಾನಕ್ಕೆ ರು.19,064 ಕೋಟಿ ಬಿಡುಗಡೆ ಮಾಡಿದ್ದು, ಈ ಬಗ್ಗೆ ದೆಹಲಿ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ.

ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಹಣ ಬಳಕೆಯಾಗಿದೆ ಎಂಬುದರ ಬಗ್ಗೆ ಪ್ರತಿ ಇಲಾಖೆಯೂ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕು. ಪ್ರಮಾಣ ಪತ್ರ ಸಲ್ಲಿಕೆಯಾಗದೆ ಅನುದಾನ ಬಿಡುಗಡೆ ಮಾಡುವಂತಿಲ್ಲ. ಆದರೆ ದೆಹಲಿ ಸರ್ಕಾರದ ಬಳಿ ರು. 19 ಸಾವಿರ ಕೋಟಿ . ಬಳಕೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಸಿಎಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Write A Comment