ಅಂತರಾಷ್ಟ್ರೀಯ

ಮೂತಿಗೆ ‘ಪಂಚ್‌’ ಕೊಟ್ರೆ ಮಳೆ ಬರುತ್ತೆ!

Pinterest LinkedIn Tumblr

mexicoಇವರ್ಯಾರೂ ಮೇರಿ ಕೋಂ ಅಲ್ಲ. ಅವಳಂತೆಯೇ ಪಂಚ್ ಬಾರಿಸ್ತಾರೆ ಆದರೂ ಒಲಿಂಪಿಕ್ಸ್‌ಗೇನೂ ಬರೋದಿಲ್ಲ. ಇವರು ಮೆಕ್ಸಿಕೋ ಮೇರಿಯರು! ಆ ದೇಶದ ಗಿರ್ರೇರೋ ಪ್ರಾಂತ್ಯದ ನಾಹುವಾ ಹಳ್ಳಿಯಲ್ಲಿ ಇವರು ಮುಖಮೂತಿ ನೋಡದೆ ಪರಸ್ಪರ ಪಂಚ್ ಬಾರಿಸಿಕೊಳ್ತಾರೆ. ಪ್ರತಿ ವರ್ಷದ ಈ ಆಚರಣೆ ಮೊನ್ನೆಯೂ ನಡೆಯಿತು.

ಇಲ್ಲಿ ಹೆಣ್ಮಕ್ಕಳು ಪರಸ್ಪರ ಪಂಚ್ ಬಾರಿಸ್ಕೊಂಡು ರಕ್ತ ಚೆಲ್ಲಿಕೊಳ್ಳಬೇಕು. ಆ ರಕ್ತವನ್ನು ಬಕೆಟ್ಟಿನಲ್ಲಿ ನೀರಿನೊಂದಿಗೆ ಮಿಕ್ಸ್ ಮಾಡಿ, ಹೊಲಕ್ಕೆ ಸುರಿಯಬೇಕು. ಹೀಗೆ ಮಾಡಿದ್ರಷ್ಟೇ ಇಲ್ಲಿ ಮಳೆ ಬರೋದು ಅನ್ನೋದು ಈ ಬುಡಕಟ್ಚು ಕ್ಯಾಥೋಲಿಕ್ ಪಂಥದವರ ನಂಬಿಕೆ.

‘ಬ್ಲಡಿ ಫಸ್ಟ್‌ಫೈಟ್‌’ ಎಂಬ ಹೆಸರಿನ ಈ ಹಬ್ಬದಂದು ಮಹಿಳೆಯರು ಬೇಗನೆ ಏಳುತ್ತಾರಂತೆ. ಬೆಳಗ್ಗೆ ಮುಂಚೆಯೇ ಶಕ್ತಿದಾಯಕ ಆಹಾರಗಳನ್ನು ತಯಾರಿಸುತ್ತಾರೆ. ಟರ್ಕಿ ಕೋಳಿ, ಚಿಕನ್, ರೈಸ್, ಬೇಯಿಸಿದ ಮೊಟ್ಟೆ, ಮಟನ್-ಹೀಗೆ ಮಾಂಸಾಹಾರವನ್ನು ಹೊಲದಲ್ಲಿಯೇ ಸಿದ್ಧಪಡಿಸಿ, ಚೆನ್ನಾಗಿ ತಿನ್ನುತ್ತಾರೆ.

ಈ ಹೊಲ ಇರುವುದು ನಾಹುವಾ ಮತ್ತು ಎಲ್ ರಾಂಚೋ ಲಾಸ್ ಲೋಮಸ್ ಎಂಬ ಎರಡು ಹಳ್ಳಿಗಳ ನಡುವೆ. ಹೀಗೆ ಹೊಡೆದಾಡಿಕೊಳ್ಳುವಾಗ ಯಾರು ಗೆಲ್ಲುತ್ತಾರೆಂಬುದು ಮುಖ್ಯವಾಗಿರುವುದಿಲ್ಲ. ಯಾರೆಷ್ಟು ರಕ್ತವನ್ನು ನೆಲಕ್ಕೆ ಸುರಿಸುತ್ತಾರೆಂಬುದು ಮುಖ್ಯವಾಗುತ್ತದಂತೆ. ಇದೆಂಥ ಆಚರಣೆ ಮಾರ್ರೆ!

Write A Comment