ರಾಷ್ಟ್ರೀಯ

ನಾಳೆ ತಮಿಳುನಾಡಲ್ಲಿ ಪ್ರತ್ಯಕ್ಷವಾಗಲಿದ್ದಾರೆ ಯಮ ಮತ್ತು ಗಣೇಶ..! ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಜಾಗ್ರತಿ ಕಾರ್ಯಕ್ರಮ

Pinterest LinkedIn Tumblr

Yamadharma-and-Ganesh

ಮಧುರೈ, ಜೂ.30: ಆ ದೇವರೇ ಬಂದು ಹೇಳಿದರೂ ನಾ ಕೇಳೋನಲ್ಲ ಎಂದು ಸವಾಲು ಹಾಕುವುದುಂಟು. ಒಂದು ವೇಲೆ ಯಮನೇ ಸಾಕ್ಷಾತ್ ಬಂದು ಹೇಳಿದರೆ..? ಈಗ ತಮಿಳುನಾಡಲ್ಲಿ ಅದೇ ಆಗುತ್ತಿದೆ. ನಾಳೆಯಿಂದ ಅಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಲಿದೆ.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಖುದ್ದಾಗಿ ಯಮಧರ್ಮರಾಜ ಮತ್ತು ಗಣಪ ಬೀದಿ ಮೇಲೆ ಬರಲಿದ್ದಾರಂತೆ..! ಅಂದರೆ ಕೆಲ ಸ್ವಯಂ ಸೇವಕರು ಸ್ಕಾಷಾತ್ ಯಮ ಮತ್ತು ಗಣೇಶನ ಗೆಟಪ್‌ನಲ್ಲಿ ರಸ್ತೆಗಳ ಮೇಲೆ ಕಾಣಿಸಿಕೊಂಡು ಜನರಿಗೆ ಹೆಲ್ಮೆಟ್ ರಹಿತ ಪ್ರಯಾಣದ ಅಪಾಯದ ಬಗ್ಗೆ ತಿಳಿಸಿ ಹೇಳಲಿದ್ದಾರಂತೆ. ಕಾಂಚೀಪುರಂ ಪೊಲೀಸರು ಗಣಪತಿಯ ವೇಷದಲ್ಲಿ , ಯು ವಿಲ್ ನಾಟ್ ಗೆಟ್ ಎ ಹೆಡ್ ಲೈಕ್ ಮಿ ವೇರ್ ಹೆಲ್ಮೆಟ್ ಆಂಡ್ ಪ್ರೊಟೆಕ್ಟ್ ಯುವರ್ ಹೆಡ್ ಎಂಬ ಸ್ಲೋಗನ್‌ಗಳೊಂದಿಗೆ ಪ್ರತ್ಯಕ್ಷವಾಗಲಿದ್ದಾರೆ.

ವಾಟ್ಸ್‌ಅಪ್, ಫೇಸ್‌ಬುಕ್‌ಗಳಲ್ಲಿ ಈ ರೀತಿಯ ಫೋಟೋಗಳು ಬಿಡುವಿಲ್ಲದೆ ಹರಿದಾಡುತ್ತಿವೆಯಂತೆ. ಹಿಂದೆ ಶಿವ ಸಿಟ್ಟಾಗಿ ಗಣಪತಿ ತಲೆ ಕತ್ತರಿಸಿದನಂತೆ. ನಂತರ ಪಾರ್ವತಿ ದುಃಖ ನೋಡಿ ಆ ಮಗುವಿಗೆ ಆನೆ ತಲೆ ತರಿಸಿ ಇಟ್ಟನಂತೆ. ಈ ಕಥೆಯನ್ನು ಪೊಲೀಸರು ಸಾರ್ವಜನಿಕರಿಗೆ ಅರ್ಥವಾಗುವಂತೆ ತಿಳಿ ಹೇಳಲಿದ್ದಾರಂತೆ.

ಇನ್ನೊಂದೆಡೆ ಆ ಯಮನೇ ಕೈಯಲ್ಲಿ ಪಾಶ ಹಿಡಿದು ಬಂದು ಹೆಲ್ಮೆಟ್ ಬಗ್ಗೆ ತಿಳಿ ಹೇಳಲಿದ್ದಾರಂತೆ.. ತಮಿಳುನಾಡಿನಲ್ಲಿ ನಾಳೆಯಿಂದ (ಜು.1ರಿಂದ) ದ್ವಿಚಕ್ರ ವಾಹನ ಸವಾರರಿಗೆ ಅಂದರೆ ಸವಾರ ಮತ್ತು ಹಿಂಬದಿ ಸವಾರ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯವಾಗಲಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಮಿಳುನಾಡು ಸರ್ಕಾರ ಭಾರೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆಯಂತೆ.

Write A Comment