ಅಂತರಾಷ್ಟ್ರೀಯ

ಉತ್ತಮ ಸಮಾಜ ಮತ್ತು ರಮಝಾನ್

Pinterest LinkedIn Tumblr

ramadan

ನಿರಂತರ ಒಂದು ತಿಂಗಳ ಕಠಿಣ ತರಬೇತಿಗಳೊಂದಿಗೆ ಆಚರಿಸಿದಂತಹ ಉಪವಾಸದ ಮೂಲಕ ಸತ್ಯವಿಶ್ವಾಸಿಯಲ್ಲಿ ತಕ್ವಾ (ದೇವಭಯ) ವು ಜಾಗೃತಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಕೆಡುಕುಗಳಿಂದ ಮುಕ್ತವಾಗಿ ಒಳಿತಿನ ಕಡೆಗೆ ಸತ್ಯವಿಶ್ವಾಸಿಯು ಮುಂದುವರಿಯುತ್ತಾನೆ ಎಂದಾದರೆ ಇದಕ್ಕಿಂತ ಹೆಚ್ಚು ಸಂತೋಷ ಇನ್ನೇನಿದೆ?. ಇದು ಆ ವ್ಯಕ್ತಿಗೆ ಮಾತ್ರವಲ್ಲ ಸಮಾಜಕ್ಕೂ ಒಳಿತಲ್ಲವೇ?

ಇನ್ನು ನಮ್ಮ ಸಮಾಜದ ಕಡೆ ದೃಷ್ಟಿ ಹಾಯಿಸೋಣ. ಮುಸ್ಲಿಮರು ಅವರವರ ಮಕ್ಕಳನ್ನು ಎಳೆಯಿಂದಲೇ ತರಬೇತುಗೊಳಿಸಲು ಪ್ರಯತ್ನಿಸುತ್ತಾರೆ. ಅಲ್ಲಾಹನ ಆದೇಶಗಳನ್ನು ಪಾಲಿಸಲು ಚಿಕ್ಕಂದಿನಿಂದಲೇ ಕರೆ ಕೊಡುತ್ತಾರೆ. ಐದು ಹೊತ್ತಿನ ನಮಾಝ್ ನ ಜೊತೆಗೆ ರಮಝಾನ್ ತಿಂಗಳ ಉಪವಾಸವನ್ನು ಮಕ್ಕಳು ಚಾಚೂ ತಪ್ಪದೇ ನಿರ್ವಹಿಸುತ್ತಾರೆ. ಶಾಲೆಗಳಲ್ಲಿ ಕೆಲ ಶಿಕ್ಷಕರು ಹಾಗೂ ಮಕ್ಕಳ ತಾಯಂದಿರು ಚಿಕ್ಕ ಮಕ್ಕಳ ಮೇಲೆ ಕರುಣೆಯನ್ನು ತೋರುತ್ತಾ ಉಪವಾಸದಿಂದ ತಡೆಯಲು ಪ್ರಯತ್ನಿಸುತ್ತಾರೆ. ಇದನ್ನು ನೈಜ ಕರುಣೆ ಎಂದು ವ್ಯಾಖ್ಯಾನಿಸಲಾಗುತ್ತದೆ.

ವಾಸ್ತವದಲ್ಲಿ ಮನೆ ಹಾಗೂ ಶಿಕ್ಷಣ ಸಂಸ್ಥೆಗಳು ತರಬೇತಿ ಕೇಂದ್ರಗಳಾಗಿವೆ. ಇಲ್ಲಿ ಮಗುವಿನ ವ್ಯಕ್ತಿತ್ವ ಮಾತ್ರ ರೂಪುಗೊಳ್ಳುವುದಲ್ಲ ಬದಲಾಗಿ ಆ ಮಗುವಿನಲ್ಲಿ ಉತ್ತಮ ಸಮಾಜವನ್ನು ರೂಪಿಸುವ ವಾತಾವರಣವು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಪವಿತ್ರ ರಮಝಾನ್ ತಿಂಗಳು ನೀಡುವ ತರಬೇತಿಯು ವ್ಯಕ್ತಿಗೂ ಸಮಾಜಕ್ಕೂ ತನ್ನದೇ ಆದ ಪ್ರಭಾವವನ್ನು ಬೀರುವಲ್ಲಿ ಬಹು ಪ್ರಾಮುಖ್ಯ ಪಾತ್ರವನ್ನು ವಹಿಸಿದೆ.

ನಿಜವಾಗಿ, ನಿರಂತರ ಆಧುನಿಕತೆಯ ಜಂಜಾಟದಿಂದಾಗಿ ನಮ್ಮ ತಾಯಂದಿರು, ಶಿಕ್ಷಕರು ಉಪವಾಸದ ನೈಜ ತಿರುಳನ್ನು, ಇದರ ಉದ್ದೇಶವನ್ನು ಅರಿತಿಲ್ಲ. ಆದ್ದರಿಂದ ಉತ್ತಮ ಭವಿಷ್ಯವನ್ನು ಮೈಗೂಡಿಸುವ ಬಗ್ಗೆ ಚಿಂತಿಸುವಂತಹ ತಾಯಂದಿರು ಈ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುವ ಅಗತ್ಯವಿದೆ. ಸ್ವತಃ ತರಬೇತುಗೊಳಿಸುವ ತಿಂಗಳ ಉಪವಾಸವನ್ನು ಆಚರಿಸುವುದರೊಂದಿಗೆ ತಮ್ಮ ಮಕ್ಕಳಿಗೂ ಈ ಬಗ್ಗೆ ಪ್ರೇರಣೆಯನ್ನು ನೀಡಬೇಕಾದ ತುರ್ತು ಅಗತ್ಯವಿದೆ. ಅಲ್ಲಾಹು ನಮಗೆಲ್ಲರಿಗೂ ಅವನ ನೈಜ ದಾಸರಾಗಿ ಜೀವಿಸುವ ತೌಫೀಕ್ ನೀಡಲಿ (ಆಮೀನ್)

ಲೇಖನ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ

Write A Comment