ರಾಷ್ಟ್ರೀಯ

ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ: ಸಂಸದ ಶಶಿ ತರೂರುರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಮುಂದಾದ ವಿಶೇಷ ತನಿಖಾ ತಂಡ

Pinterest LinkedIn Tumblr

sunanda

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ ಸಂಬಂಧ ಕಾಂಗ್ರೆಸ್ ಮಾಜಿ ಸಚಿವ ಹಾಗೂ ಸಂಸದ ಶಶಿ ತರೂರ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ವಿಶೇಷ ತನಿಖಾ ತಂಡ ನಿರ್ಧರಿಸಿದೆ.

ಸುನಂದಾ ಪುಷ್ಕರ್ ಪ್ರಕರಣ ಸಂಬಂಧ ಇದುವರೆಗೂ ಆರು ಮಂದಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಶಶಿ ತರೂರ್ ಮನೆ ಕೆಲಸದಾತ ನಾರಾಯಣ ಸಿಂಗ್, ಡ್ರೈವರ್ ಭಜರಂಗಿ ಮತ್ತು ಆತನ ಸ್ನೇಹಿತ ಸಂಜಯ್ ದೀವಾನ್, ಎಸ್ ಕೆ ಶರ್ಮಾ, ವಿಕಾಸ್ ಅಹ್ಲಾವತ್, ಸುನಿಲ್ ಠಾಕ್ರು ಎಂಬುವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪರೀಕ್ಷೆ ವೇಳೆ ಸುಮಾರು 100 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಆರು ಮಂದಿಗೆ ಶಶಿ ತರೂರ್, ಹಾಗೂ ಪಾಕಿಸ್ತಾನ ಪತ್ರಕರ್ತೆ ಮೆಹರ್ ತರಾರ್ ನಡುವಿನ ಸಂಬಂಧ ಮತ್ತು, ಸುನಂದಾ ಮೈಮೇಲೆ ಇದ್ದ ಗಾಯಗಳ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಪ್ರಕರಣ ಸಂಬಂಧ ಮೂರು ಭಾರಿ ಶಶಿ ತರೂರ್ ಅವರನ್ನು ವಿಚಾರಣೆಗೊಳಪಡಿಸಿರುವ ವಿಶೇಷ ತನಿಖಾ ತಂಡ ಶೀಘ್ರದಲ್ಲೇ ಸುಳ್ಳು ಪತ್ತೆ ಪರೀಕ್ಷೆ ನಡೆಸಲಿದೆ.

Write A Comment