ರಾಷ್ಟ್ರೀಯ

ಪ್ರೀತಿಗೊಪ್ಪದ ಗೆಳತಿಯ ಅಶ್ಲೀಲ ಚಿತ್ರವನ್ನು ಫೇಸ್ ಬುಕ್ ಗೆ ಹಾಕಿದ !

Pinterest LinkedIn Tumblr

9767revengepornಪ್ರೀತಿಸಲು ಒಪ್ಪದ ಗೆಳತಿಯ ಅಶ್ಲೀಲ ಚಿತ್ರಗಳನ್ನು ಫೇಸ್‌ಬುಕ್‌ಗೆ ಹರಿಬಿಟ್ಟಿದ್ದ ಯುವಕನೊಬ್ಬ ಸಿಐಡಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ತ್ರಿಪುರದಲ್ಲಿ ಈ ಘಟನೆ ನಡೆದಿದ್ದು ತನ್ನನ್ನು  ಪ್ರೀತಿಸಲು ಒಪ್ಪದ ಗೆಳತಿಯ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದ ಅರೂಪ್ ದೇಬ್ ಎಂಬ ಯುವಕ ನೆಟ್ ಗೆ ಅಪ್ ಲೋಡ್ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅಪರಾಧ ಪತ್ತೆ ದಳದ ಅಧಿಕಾರಿಗಳು ತ್ರಿಪುರ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷವೆಂದರೆ ವಿಚಾರಣೆ ವೇಳೆ ಆರೋಪಿ ದೇಬ್ ಈ ಹಿಂದೆ ಯುವತಿಯ ಪೋಷಕರು ದೂರವಾಣಿ ಕರೆ ಮಾಡಿ ನಮ್ಮ ಪೋಷಕರನ್ನು ನಿಂದಿಸಿದ್ದ ಕಾರಣಕ್ಕಾಗಿ  ಪ್ರತಿಕಾರ ತೀರಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Write A Comment