ಕರ್ನಾಟಕ

400ಕ್ಕೂ ಅಧಿಕ ಮಂದಿ ಕೀಬೋರ್ಡ್ ನುಡಿಸುವ ಮೂಲಕ ಗಿನ್ನಿಸ್ ದಾಖಲೆ

Pinterest LinkedIn Tumblr

key

ಬೆಂಗಳೂರು, ಜೂ.28: ಶ್ರೀ ವೀಣಾವಾಣಿ ಸಂಗೀತ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ 400ಕ್ಕೂ ಅಧಿಕ ಮಂದಿ ಕೀಬೋರ್ಡ್ ನುಡಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದರು. ಮೊಟ್ಟ ಮೊದಲ ಬಾರಿಗೆ ಕೀ ಬೋರ್ಡ್ ವಾದ್ಯಗಾರರು ಒಂದೇ ವೇದಿಕೆಯಲ್ಲಿ ಸಂಗೀತ ನುಡಿಸುವ ಮೂಲಕ ದಾಖಲೆ ನಿರ್ಮಿಸಿದರು. ಕಾರ್ಯಕ್ರಮಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಾಕ್ಷಿಯಾದರು.

1974ರಲ್ಲಿ ವಿದ್ವಾನ್ ಸಂಪತ್ ಕುಮಾರ್ ಶರ್ಮಾ ಅವರ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ವೀಣಾವಾಣಿ ಸಂಗೀತ ಶಾಲೆ ಕಳೆದ 15 ವರ್ಷಗಳಿಂದ ಗಿರೀಶ್ ಕುಮಾರ್ ಅವರ ಸಾರಥ್ಯದಲ್ಲಿ ವಿವಿಧ ವಿನೂತನ ಸಾಧನೆಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಅದರಲ್ಲಿ ಇಂದಿನ ಗಿನ್ನಿಸ್ ದಾಖಲೆಯ ಕಾರ್ಯಕ್ರಮವು ಒಂದಾಗಿದೆ. ಸಂಸ್ಥೆಯ ವತಿಯಿಂದ ಇದುವರೆಗೆ 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಂಗೀತ ಕಲಿತು ಸಂಗೀತ ಕ್ಷೇತ್ರವನ್ನು ಸಂಪನ್ನಗೊಳಿಸಿದ್ದಾರೆ.

2011ರಲ್ಲಿ 126 ಮಂದಿ ಸಂಗೀತಗಾರರು ಒಟ್ಟಾಗಿ ವಾದ್ಯಗೋಷ್ಠಿ ನಡೆಸಿರುವುದೇ ಪ್ರಥಮ ಗಿನ್ನಿಸ್ ದಾಖಲೆಯಾಗಿತ್ತು. ಅದನ್ನು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 175 ಮಂದಿ ವಾದ್ಯಗೋಷ್ಠಿ ನಡೆಸುವ ಮೂಲಕ ಅಳಿಸಿ ಹಾಕಿದ್ದಾರೆ. 2014ರಲ್ಲಿ 229 ಮಂದಿ ಚೆನ್ನೈನಲ್ಲಿ ವಾದ್ಯಗೋಷ್ಠಿ ನಡೆಸುವ ಮೂಲಕ ಆ ದಾಖಲೆಯನ್ನು ಅಳಿಸಿ ಹಾಕಿದ್ದರು. ಇದೀಗ ವೀಣಾವಾಣಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಈ ಮೂರು ದಾಖಲೆಗಳನ್ನು ಅಳಿಸಿ ಗಿನ್ನಿಸ್ ದಾಖಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಗುರೂಜಿ, ಆರ್ಟ್ ಆಫ್ ಲಿವಿಂಗ್‌ನ ರವೀಂದ್ರ ಪ್ರಸಾದ್, ಉದ್ಯಮಿ ಉದಯ ಗರುಡಾಚಾರ್ ಮತ್ತಿತರರು ಹಾಜರಿದ್ದರು.

Write A Comment