ರಾಷ್ಟ್ರೀಯ

ಮೋದಿ ಸರ್ಕಾರವನ್ನು ಮತ್ತೆ ಕುಟುಕಿದ ಬಿಜೆಪಿಯ ಹಿರಿಯಜ್ಜ !

Pinterest LinkedIn Tumblr

85555102lk-adwaniಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ. ರಾಜಕೀಯ ಜೀವನದಲ್ಲಿ ಆರೋಪ ಕೇಳಿ ಬಂದಾಗ ರಾಜಿನಾಮೆ ನೀಡಬೇಕು ಬಿಜೆಪಿಯ ಹಿರಿಯಜ್ಜ ಎಲ್.ಕೆ.ಆಡ್ವಾಣಿ ಮೋದಿ ಸರ್ಕಾರಕ್ಕೆ ಮತ್ತೊಮ್ಮೆ ಛಾಟಿ ಬೀಸಿದ್ದಾರೆ.

ಮೋದಿ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್ ಮತ್ತು ಸ್ಮೃತಿ ಇರಾನಿ ಮತ್ತು ಮಹಾರಾಷ್ಟ್ರದಲ್ಲಿ ಪಂಕಜಾ ಮುಂಡೆ ಮತ್ತು ವಸುಂಧರಾ ರಾಜೆ ವಿರುದ್ಧದ ಹಾಲಿ ಇರುವ ಆರೋಪಗಳ ಹಿನ್ನೆಲೆಯಲ್ಲಿ ಆಡ್ವಾಣಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದ್ದು 1996ರಲ್ಲಿ ಜೈನ್ ಹವಾಲಾ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಲೋಕಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೆ. ನ್ಯಾಯಾಲಯದಿಂದ ಆರೋಪ ಮುಕ್ತಗೊಂಡ ಬಳಿಕ 1998ರಲ್ಲಿ ಪುನರಾಯ್ಕೆಯಾಗಿದ್ದೆ ಎನ್ನುವ ಮೂಲಕ ಪರೋಕ್ಷವಾಗಿ ಈ ಮೂವರ ರಾಜಿನಾಮೆಗೆ ಒತ್ತಾಯಿಸಿದ್ದಾರೆ.

ವಿಶೇಷವೆಂದರೆ ಇದೀಗ ವಿವಾದಕ್ಕೆ ಈಡಾಗಿರುವ ಬಿಜೆಪಿ ನಾಯಕಿಯರ ಹೆಸರನ್ನು ಹೆಸರಿಸದೇ ಪಕ್ಷದ ನಾಯಕತ್ವಕ್ಕೆ ಟಾಂಗ್ ನೀಡಿದ್ದು ಹವಾಲಾ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ತಕ್ಷಣ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿತಕ್ಷಣವೇ ವಾಜಪೇಯಿಗೆ ದೂರವಾಣಿ ಮೂಲಕ ನಿರ್ಧಾರ ಪ್ರಕಟಿಸಿದೆ.ಅಷ್ಟೇ ಅಲ್ಲ,ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಸಂದರ್ಭದಲ್ಲಿ ತ್ಯಾಗಪತ್ರ ನೀಡಿದ್ದರು ಎಂದು ಮೋದಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

Write A Comment