ಅಂತರಾಷ್ಟ್ರೀಯ

2014ರ ಚುನಾವಣೆಯಲ್ಲಿ ಪೊಲೀಸರಿಂದಲೇ ಮಾವನ ಹಕ್ಕುಗಳ ಉಲ್ಲಂಘನೆ

Pinterest LinkedIn Tumblr

Human-rights-in-Electio-n

ವಾಷಿಂಗ್ಟನ್, ಜೂ.26- ಕಳೆದ 2014ರ ಅವಧಿಯಲ್ಲಿ ಭಾರತದಲ್ಲಿ ಭದ್ರತಾಪಡೆಗಳು ಮತ್ತು ಆರಕ್ಷಕರು ಗಣನೀಯವಾಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವುದು ಗಮನಾರ್ಹ ಅಂಶವಾಗಿದೆ ಎಂದು ಹೇಳಿರುವ ಅಮೆರಿಕ ಸರ್ಕಾರದ ವರದಿಯೊಂದು, 2014ರ ಸಾರ್ವತ್ರಿಕ ಚುನಾವಣೆಯಲ್ಲಿಯೂ

ಸಾಕಷ್ಟು ಹೆಚ್ಚು ಪ್ರಮಾಣದಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದಿವೆ ಎಂದು ಹೇಳಿದೆ. 2014ರ ಏಪ್ರಿಲ್‌ನಲ್ಲಿ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಗಳು ಇತಿಹಾಸದಲ್ಲೇ  ಅತ್ಯಂತ ಭಾರೀ ಚುನಾವಣೆಯಾಗಿತ್ತು. ಈ ಸಂದರ್ಭ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಿದ ಹೊರತಾಗಿಯೂ, ಹಕ್ಕು ಉಲ್ಲಂಘನೆಗಳೂ ಗಣನೀಯವಾಗಿದೆ.

ನಂತರ, ಅತ್ಯಾಚಾರಗಳು, ಕೌಟುಂಬಿಕ ದೌರ್ಜನ್ಯ, ಹಿಂಸಾಚಾರಗಳು, ವರದಕ್ಷಿಣೆ ಸಾವುಗಳು, ಮರ್ಯಾದಾ ಹತ್ಯೆಗಳು ಹಾಗೂ ಮಹಿಳೆಯರ ವಿರುದ್ಧದ ಲಿಂಗ ತಾರತಮ್ಯ ಸಂಬಂಧಿ ಅಕ್ರಮಗಳು 2014ರ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ನಡೆದಿವೆ ಎಂದು ವರದಿಯಲ್ಲಿ ಹೇಳಿದೆ. ಮಾನವ ಹಕ್ಕುಗಳ ಉಲ್ಲಂಘನೆ ವಿಷಯದಲ್ಲಿ ಭದ್ರತಾಪಡೆಗಳು, ಪೊಲೀಸ್ ಸಿಬ್ಬಂದಿ (ಅಧಿಕಾರಿಗಳು ಮತ್ತು ಸಿಬ್ಬಂದಿ) ಪಾತ್ರವೇ ಹೆಚ್ಚಿದೆ. ಇದರಲ್ಲಿ ಹಿಂಸಾಚಾರ, ಅಮಾಯಕರ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು, ವ್ಯಾಪಕ ಭ್ರಷ್ಟಾಚಾರಗಳು ನಡೆದಿದ್ದರೂ, ಈ ಅಪರಾಧಗಳ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು  ಕೈಗೊಳ್ಳಲಾಗಿಲ್ಲ. ಮಹಿಳೆಯರು, ದಲಿತರು, ಬುಡಕಟ್ಟು ಜನರು, ಮಕ್ಕಳುಗಳ ಹತ್ಯೆಗಳು ಅವ್ಯಾಹತವಾಗಿ ನಡೆದಿವೆ. ಪ್ರಮುಖವಾಗಿ ಲಿಂಗ ತಾರತಮ್ಯ, ಧಾರ್ಮಿಕ ವಿಷಯಗಳು, ಜಾತಿಗಳೇ ಹಿಂಸಾಚಾರದ ಕೇಂದ್ರ ಬಿಂದುಗಳಾಗಿವೆ.
ಇದೆಲ್ಲದರ ಜೊತೆ ದೇಶದ ಕಾರಾಗೃಹಗಳಲ್ಲಿನ ಹೀನಾಯಸ್ಥಿತಿ, ಅನಗತ್ಯ ಬಂಧನ, ತನಿಖೆ, ವಿಚಾರಗಳ ವಿಳಂಬ, ದೀರ್ಘಕಾಲ ವಿಚಾರಣೆಯಿಲ್ಲದೆ ವ್ಯಕ್ತಿಗಳನ್ನು ಕೊಳೆ ಹಾಕುವುದು ಮುಂತಾದವು ಸೇರಿವೆ. ಬಾಲ್ಯವಿವಾಹ, ಬಾಲಕಾರ್ಮಿಕ ವ್ಯವಸ್ಥೆ, ಅಪ್ರಾಪ್ತ ಹಾಗೂ ವಯಸ್ಕ ಹೆಣ್ಣು ಮಕ್ಕಳ ಕಳ್ಳ ಸಾಗಾಟ ಹಾಗೂ ವೇಶ್ಯಾವಾಟಿಕೆಗಳಿಗೆ ಮಾರಾಟದಂತಹ ಪ್ರಕರಣಗಳು ಹೆಚ್ಚಿವೆ. ಈ ಪೈಕಿ ಕೆಲವು ಪ್ರಕರಣಗಳು ದಾಖಲಾಗಿ ಕೆಲವರ ಬಂಧನವಾಗಿದ್ದರೂ ಶಿಕ್ಷೆ ಪ್ರಮಾಣ ತೀರಾ ಕಡಿಮೆ ಎಂದು ಅಮೆರಿಕ ಸರ್ಕಾರ ತಯಾರಿಸಿರುವ 2014ರ ವರದಿ ವಿವರಿಸಿದೆ.

Write A Comment