ರಾಷ್ಟ್ರೀಯ

ಸಂಕಷ್ಟದಲ್ಲಿ ಸಚಿವೆ ಸ್ಮೃತಿ ಇರಾನಿ; ವಿದ್ಯಾರ್ಹತೆ ಬಗ್ಗೆ ತಪ್ಪು ಮಾಹಿತಿ ಆರೋಪದ ಕುರಿತು ಅರ್ಜಿ ವಿಚಾರಣೆ ನಡೆಸಲು ದೆಹಲಿ ನ್ಯಾಯಾಲಯ ಸಮ್ಮತಿ

Pinterest LinkedIn Tumblr

Smriti-Irani

ಹೊಸದಿಲ್ಲಿ: ಮಾನವ ಸಂಪನ್ಮೂಲ ಅಭಿನೃದ್ಧಿ ಸಚಿವೆ ಸ್ಮೃತಿ ಇರಾನಿ, ಚುನಾವಣಾ ಆಯೋಗಕ್ಕೆ ವಿಭಿನ್ನ ಪದವಿ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಪ್ರಕರಣ ವಿಚಾರಣೆಗೆ ಯೊಗ್ಯವೆಂದು ಕೋರ್ಟ್ ಪರಗಣಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 28ಕ್ಕೆ ನಿಗದಿಗೊಳಿಸಿದೆ.

‘ಪ್ರಕರಣದ ಮುಂದಿನ ವಿಚಾರಣೆ ವೇಳೆ ದೂರುದಾರರು ಸೂಕ್ತ ಸಾಕ್ಷ್ಯಗಳನ್ನು ಒದಗಿಸಬೇಕು,’ ಎಂದು ಸ್ಮೃತಿ ವಕೀಲರು ಸ್ಪಷ್ಟಪಡಿಸಿದ್ದಾರೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ದೂರಿಗೆ ಸಂಬಂಧಿಸಿದ ವಾದ, ವಿವಾದವನ್ನು ಜೂ.1ರಂದು ಆಲಿಸಿ, ಕಾನೂನು ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಬಗೆಗಿನ ಆದೇಶವನ್ನು ಕಾಯ್ದಿರಿಸಿದ್ದರು.

‘ಸ್ಮೃತಿ ಇರಾನಿ ಲೋಕಸಭಾ ಹಾಗೂ ರಾಜ್ಯಸಭಾ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗದ ಮುಂದೆ ಉದ್ದೇಶಪೂರ್ವಕವಾಗಿ, ವಿಭಿನ್ನ ಪದವಿ ಪಡೆದಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾರೆ’, ಎಂದು ಅಹ್ಮರ್ ಖಾನ್ ಎಂಬುವವರು ದೂರು ದಾಖಲಿಸಿದ್ದರು.

‘ಚುನಾವಣಾ ಆಯೋಗದ ಮುಂದೆ ಸಲ್ಲಿಸಿದ ಎರಡು ವಿಭಿನ್ನ ಪ್ರಮಾಣ ಪತ್ರಗಳಲ್ಲಿ ಒಂದನ್ನು ಮಾತ್ರ ಪ್ರಮಾಣೀಕರಿಸಲು ಸಾಧ್ಯ’, ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಸ್ಮೃತಿ ತಮ್ಮ ಶೈಕ್ಷಣಿಕ ಪದವಿ ಬಗ್ಗೆ ಮಾತ್ರವಲ್ಲದೇ, ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಾವು ಹೊಂದಿರುವ ಚರಾಸ್ತಿ ಬಗ್ಗೆಯೂ ತಪ್ಪು ಮಾಹಿತಿ ಸಲ್ಲಿಸಿದ್ದಾರೆ. ಇದು ಸಾರ್ವಜನಿಕ ಪ್ರಾತಿನಿಧಿತ್ವ ಕಾಯಿದೆಯ ಸೆಕ್ಷನ್ 125ಎ ಅಡಿಯಲ್ಲಿ ಅಪರಾಧ. ಇವರಿಂದ ಮತ್ತಷ್ಟು ತಪ್ಪುಗಳು ಆಗಿರುವ ಸಾಧ್ಯತೆ ಇದ್ದು, ಸೂಕ್ತ ತನಿಖೆ ನಡೆಸಬೇಕು,’ ಎಂದು ದೂರುದಾರರು ಆಗ್ರಹಿಸಿದ್ದರು.

ವಿವಾದವೇನು?: ಏಪ್ರಿಲ್, 2004ರ ಚುನಾವಣೆ ವೇಳೆ ಸ್ಮೃತಿ 1996ರಲ್ಲಿ ದಿಲ್ಲಿ ವಿವಿ (ದೂರ ಶಿಕ್ಷಣ)ಯಿಂದ ಬಿಎ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದರೆ, ಜುಲೈ 11, 20011ರಂದು ಗುಜರಾತ್‌ನಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವಾಗ, ದಿಲ್ಲಿ ವಿವಿಯ ದೂರ ಶಿಕ್ಷಣದ ಬಿ.ಕಾಂ. ಮೊದಲ ವರ್ಷದ ಪದವಿ ಪಡೆದಿರುವುದಾಗಿ ಉಲ್ಲೇಖಿಸಿದ್ದರು. ಈ ವಿಭಿನ್ನ ಪ್ರಮಾಣ ಪತ್ರಗಳು ಅನೇಕ ಗೊಂದನಗಳನ್ನು ಸೃಷ್ಟಿಸಿವೆ.

Write A Comment