ಮನೋರಂಜನೆ

ಕಿರುಕುಳದ ದೂರು ನೀಡಿದಕ್ಕಾಗಿ ಹಲ್ಲೆಗೀಡಾದ ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ್ತಿ

Pinterest LinkedIn Tumblr

dolly singh

ಕಾನ್ಪುರ: ಕಿರುಕುಳ ನೀಡಿದವರ ವಿರುದ್ಧ ದೂರು ನೀಡಿದ ನಂತರ ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ್ತಿ ಡಾಲಿ ಸಿಂಗ್‌ ಮೇಲೆ ಹಲ್ಲೆ ನಡೆದಿದೆ.

‘ಈ ದಾಳಿ ಹಿಂದೆ ಕಿರುಕುಳ ನೀಡಿದ್ದ ಗ್ರಾಮದ ಇಬ್ಬರು ವ್ಯಕ್ತಿಗಳ ಕೈವಾಡ ಇದೆ. ಅವರ ವಿರುದ್ಧ ದೂರು ನೀಡಿರುವ ಸಿಟ್ಟಿಗೆ ಈ ಕೃತ್ಯ ಎಸಗಿದ್ದಾರೆ,’ ಎಂದು ಡಾಲಿ ಹೇಳಿದ್ದಾರೆ.

ಜೂನ್‌ 15ರಂದು ಡಾಲಿಯ ಮನೆಗೆ ನುಗ್ಗಿದ 12ಕ್ಕೂ ಹೆಚ್ಚು ಮಂದಿ ಅವರನ್ನು ಥಳಿಸಿದ್ದರು. ಪರಿಣಾಮವಾಗಿ ಅವರ ಮೂಗಿನ ಮೂಳೆ ಮುರಿದಿದೆ. ‘ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಮನಸೋಇಚ್ಛೇ ನನ್ನನ್ನು ಥಳಿಸಿದರು. ನನ್ನ ಬಟ್ಟೆ ಹರಿದರು,’ ಎಂದು ಡಾಲಿ ದೂರಿದ್ದಾರೆ. ಈ ಘಟನೆ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಕಳೆದ ತಿಂಗಳು ಉಜಲಾ ಠಾಕೂರ್ ಮತ್ತು ರಿಶಿ ಗಾಂಧಿ ನನ್ನನ್ನು ಚುಡಾಯಿಸಿದ್ದರು. ಅದನ್ನು ಪ್ರತಿಭಟಿಸಿದ್ದೆ. ಜೂನ್‌ 15ರಂದು ತರಬೇತಿ ಮುಗಿಸಿ ಸಂಜೆ ವಾಪಸಾದ ನಂತರ ಮನೆಗೆ ನುಗ್ಗಿದ 10-12 ಮಂದಿ ನನ್ನನ್ನು ಥಳಿಸಿದರು,’ ಎಂದು ಡಾಲಿ ಹೇಳಿದ್ದಾರೆ.

Write A Comment