ರಾಷ್ಟ್ರೀಯ

ರೇಲ್ವೆ ಸ್ಟೇಷನ್‌ನಲ್ಲಿ ಉಗುಳಿದರೆ 500 ರೂ.ದಂಡ; ವಾರಕ್ಕೆ ಸುಮಾರು 90 ಸಾವಿರ ರೂ.ನಷ್ಟು ದಂಡ ಸಂಗ್ರಹ

Pinterest LinkedIn Tumblr

station

ಹೊಸದಿಲ್ಲಿ: ದೇಶದ ರೈಲ್ವೆ ನಿಲ್ದಾಣವನ್ನು ಸ್ವಚ್ಚವಾಗಿಟ್ಟರೆ, ಪ್ರಧಾನಿ ಮೋದಿಯ ಸ್ವಚ್ಛತಾ ಅಭಿಯಾನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಿಲ್ದಾಣಗಳನ್ನು ಸ್ವಚ್ಚವಾಗಿಡಲು ಉತ್ತರ ರೈಲ್ವೆ ರೈಲ್ವೆ ನಾಂದಿ ಹಾಡಿದೆ. ಮೊದಲ ಹಂತವಾಗಿ, ಹೊಸದಿಲ್ಲಿ ನಿಲ್ದಾಣದಲ್ಲಿ ಕಸ ಹಾಕಿದರೆ ಅಥವಾ ಉಗುಳಿದರೆ ಸುಮಾರು 200- 500 ರೂ.ವರೆಗೂ ದಂಡ ವಿಧಿಸಲಾಗುತ್ತಿದೆ.

ಈ ಅಭಿಯಾನದಿಂದ ಈಗಾಗಲೇ ವಾರಕ್ಕೆ ಸುಮಾರು 75 ಸಾವಿರ ರೂ.ನಿಂದ 90 ಸಾವಿರ ರೂ.ನಷ್ಟು ದಂಡ ಸಂಗ್ರಹಿಸಲಾಗಿದೆ. ತಪ್ಪಿತಸ್ಥರ ಮೇಲೆ ರೈಲ್ವೆ ರಕ್ಷಣಾ ಪಡೆ ಹಾಗೂ ಟಿಕೆಟ್ ಕೆಲೆಕ್ಟರ್ಸ್‌ ಕಣ್ಣಿಡುತ್ತಿದ್ದು, ದಂಡ ಕಟ್ಟಲು ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.

‘ನಿಲ್ದಾಣವನ್ನು ಸ್ವಚ್ಛವಾಗಿಡುವಂತೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಅಭಿಯಾನವನ್ನು ಇತರೆ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು,’ ಎಂದು ಉತ್ತರ ರೈಲ್ವೆಯ, ದಿಲ್ಲಿ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಅರುಣ್ ಅರೋರಾ ತಿಳಿಸಿದ್ದಾರೆ.

‘ಅಭಿಯಾನವನ್ನು ತೀವ್ರಗೊಳಿಸಲಾಗುತ್ತಿದ್ದು, ವಾರಕ್ಕೆ ಲಕ್ಷ ರೂ. ದಂಡ ಸಂಗ್ರಹಿಸುವ ಗುರಿ ಇದೆ. ರೈಲ್ವೆ ನಿಲ್ದಾಣವನ್ನು ಸ್ವಚ್ಛವಾಗಿಡುವಲ್ಲಿ ವ್ಯಾಪಾರಿಗಳು, ಪ್ರಯಾಣಿಕರ ಭಾಗಿ ಅತ್ಯಗತ್ಯ. ಅಂಗಡಿಗಳ ಮುಂದೆ ಕಸದ ತೊಟ್ಟಿಗಳನ್ನಿಡಲು ಹಾಗೂ ಅವನ್ನು ಎರಡು ಗಂಟೆಗಳಿಗೊಮ್ಮೆ ಖಾಲಿ ಮಾಡಲು ವ್ಯಾಪಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಈ ಸ್ವಚ್ಛತಾ ಅಭಿಯಾನವನ್ನು ದಿಲ್ಲಿಯ ಹಳೆ ರೈಲ್ವೆ ನಿಲ್ದಾಣಕ್ಕೂ ವಿಸ್ತರಿಸಲಾಗುವುದು,’ ಎಂದಿದ್ದಾರೆ.

‘ಜೂನ್‌ನಲ್ಲಿ 2.3 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ. ದಂಡ ತೆರಲು ವಿಫಲವಾದ 50 ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ಅಂತಿಮವಾಗಿ ದಂಡ ತೆತ್ತಿದ್ದಾರೆ. ತಪ್ಪಿತಸ್ಥರು ಪೂರ್ತಿ ದಂಡ ಕಟ್ಟುವಲ್ಲಿ ವಿಫಲವಾದಲ್ಲಿ, 50-100 ರೂ. ದಂಡ ಪಡೆದು ಎಚ್ಚರಿಸಿ ಕಳುಹಿಸಲಾಗಿದೆ,’ ಎಂದು ಅರೋರಾ ತಿಳಿಸಿದ್ದಾರೆ.

Write A Comment