ರಾಷ್ಟ್ರೀಯ

2017ರಿಂದ ಐಐಟಿ ಖರಗಪುರದಲ್ಲಿ ಎಂಬಿಬಿಎಸ್ ಶಿಕ್ಷಣ

Pinterest LinkedIn Tumblr

iit-kharagpur

ನವದೆಹಲಿ: ಪಶ್ಚಿಮ ಬಂಗಾಳದ ಐಐಟಿ ಖರಗಪುರ, ವೈದ್ಯಕೀಯ ಶಿಕ್ಷಣ ಪ್ರಾರಂಭಿಸುತ್ತಿರುವ ಮೊದಲ ಎಂಜಿನಿಯರಿಂಗ್ ಕಾಲೇಜು ಎಂಬ ಹೆಮ್ಮೆಗೆ ಪಾತ್ರವಾಗಲಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜು ಡಾ. ಬಿ ಸಿ ರಾಯ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ೨೦೧೭ರಲ್ಲಿ ಕೆಲಸ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೊದಲಿಗೆ ಆಸ್ಪತ್ರೆ ೪೦೦ ಹಾಸಿಗೆಗಳನ್ನು ಹೊಂದಲಿದ್ದು ನಂತರ ಈ ಸಂಖ್ಯೆ ೭೫೦ಕ್ಕೆ ಏರಲಿದೆ ಎನ್ನಲಾಗಿದೆ.

“ಈ ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ೨೩೦ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಕಟ್ಟಡ ನಿರ್ಮಾಣ ಸಂಸ್ಥೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ೨೬ ತಿಂಗಳುಗಳಲ್ಲಿ ಮುಗಿಯಲಿದೆ” ಎಂದು ಐಐಟಿ ಖರಗಪುರದ ನಿರ್ದೇಶಕ ಪಾರ್ಥಾ ಪ್ರತಿಂ ಚಕ್ರವರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಇದರಿಂದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಹಲವು ವಿಭಾಗಗಳು ಸಂಶೋಧನೆಗಳನ್ನು ಒಟ್ಟಿಗೆ ತರಲಿದೆ. ಸಟಲ್ಲೈಟ್ ಕೇಂದ್ರಗಳು ಮತ್ತು ಇತರ ಆಸ್ಪತ್ರೆಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಜನಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ” ಎಂದು ಆವರು ತಿಳಿಸಿದ್ದಾರೆ.

ಈ ವೈದ್ಯಕೀಯ ಶಿಕ್ಷಣ ಕಾಲೇಜು ಎಂಬಿಬಿಎಸ್, ಎಂಡಿ, ಎಂಎಸ್ ಮತ್ತು ಡಿಎಂ ಪದವಿಗಳನ್ನು ನೀಡಲಿದೆ.

Write A Comment