ಅಂತರಾಷ್ಟ್ರೀಯ

ಸೆಲ್ಫೀಗೆ ಬಿದ್ದು ಮುಖ ಬದಲಾಯಿಸಿಕೊಂಡ್ರು!; ಸ್ಮಾರ್ಟ್ ಫೋನ್ ನಲ್ಲಿ ಫೋಟೋ ಚೆನ್ನಾಗಿ ಬರಲೆಂದು ದಾರಿ ತಪ್ಪುತ್ತಿರುವ ಯುವ ಜನತೆ

Pinterest LinkedIn Tumblr

selfie

ಲಂಡನ್: ಸ್ಮಾರ್ಟ್ ಫೋನ್ ಗಳು ತಂದ ಸೆಲ್ಫೀ ಮೇನಿಯಾದ ಹಾವಳಿ ಇದೀಗ ಮತ್ತೊಂದು ಅತಿರೇಕದ ಹಂತ ತಲುಪಿದೆ. ಹದಿಹರೆಯದವರನ್ನು ಈ ಸೆಲ್ಫೀ ಹುಚ್ಚು ದಿಕ್ಕು ತಪ್ಪಿಸುತ್ತಿರುವ ಪರಿ ನಿಜಕ್ಕೂ ದಂಗುಬಡಿಸುವಂತಿದೆ.

ಫೋನ್ ನಲ್ಲಿ ಫ್ರಂಟ್ ಕ್ಯಾಮೆರಾದಷ್ಟು ಇನ್ಯಾವ ಆ್ಯಪ್ ಗಳೂ ಬಳಕೆಯಾಗುತ್ತಿಲ್ಲ. ಪ್ರತಿಪ್ರಶ್ನೆಗೂ ಸೆಲ್ಫಿ ಮೂಲಕವೇ ಉತ್ತರ ಎಂಬಂತಾಗಿ ಹೋಗಿದೆ. ಕನ್ನಡಿ ಮುಂದೆ ನಿಂತು ಮೈಮರೆಯುತ್ತಿದ್ದ ಯುವಜನಾಂಗ ಈಗ ಸೆಲ್ಫೀ ಮುಂದೆ ಪ್ರತಿಷ್ಠಾಪನೆಯಾಗಿದೆ. ಆದರೆ ಅವರಿಗೆ ತಾವು ಎಷ್ಟು ಚೆಂದ ಕಂಡರೂ ತೃಪ್ತಿ ಇಲ್ಲದಂತಾಗಿದೆ. ಹೇಗೆ ಫೋಸ್ ಕೊಟ್ಟರೂ ಸಮಾಧಾನ ಸಿಗುತ್ತಿಲ್ಲ. ಸೆಲ್ಫೀಯಲ್ಲಿ ಚೆನ್ನಾಗಿ ಕಾಣಬೇಕು, ತಮ್ಮ ಭಂಗಿಗಳು ಟ್ರೆಂಡಿಯಾಗಿರಬೇಕು ಎಂಬೆಲ್ಲ ಭ್ರಮೆಯಲ್ಲಿ ಮುಖಕ್ಕೆ ಸರ್ಜರಿ ಮಾಡಿಸಿಕೊಳ್ಳುವ ಸಾಹಸಕ್ಕೂ ಕೈ ಹಾಕಿದ್ದಾರೆ.

ಚೂಪು ಮೂತಿ, ಗುಳಿಕೆನ್ನೆ,ಏರುಹುಬ್ಬು, ಮೊನಚು ದವಡೆ ಹೀಗಿದ್ದರೇ ಸೆಲ್ಫೀಲಿ ಸುಂದರವಾಗಿ ಕಾಣೋದೆಂದು ಭಾವಿಸಿರುವ ಟೀನೇಜರ್ಸ್, ಭಾರಿ ಹಣ ತೆತ್ತು ಆಪರೇಷನ್ ಥೇಟರ್ ಎದುರು ಕ್ಯೂ ನಿಲ್ಲುತ್ತಿದ್ದಾರೆ. ಒಂದು ಕಾಲದಲ್ಲಿ 40 ದಾಟಿದವರು ಸೌಂದರ್ಯವರ್ಧನೆಗಾಗಿ ಪ್ಲಾಸ್ಟಿಕ್, ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗುತ್ತಿದ್ದರು. ಆದರೆ ಸೆಲ್ಫೀಯಿಂದ ಚಿತ್ರಣ ಬದಲಾಗಿದೆ. ಈ ಸಂಬಂಧ ಮೇಲ್ ಟುಡೆ ವರದಿ ಪ್ರಕಟಿಸಿದೆ.

ವೈದ್ಯರೇನಂತಾರೆ?: ಅನುಷ್ಕಾ ಶರ್ಮಾಳ ಹಾಗೆ ತುಟಿ ಅಳತೆ ಹೆಚ್ಚಿಸಿಕೊಡಿ, ಕರೀನಾಳಂತೆ ಆ್ಯಪಲ್ ಕೆನ್ನೆ ಮಾಡಿ, ಕೊಹ್ಲಿಯಂತೆ ಮೊನಚು ದವಡೆ ಶೇಪ್ ಬೇಕು, ಹೃತಿಕ್ ನಂತೆ ಕೆಳದವಡೆ ಆಗಬೇಕು, ಕತ್ರೀನಾಳ ಮೂಗು ಬೇಕು, ಮೇಗನ್ ಫಾಕ್ಸ್ ರೀತಿ ಹುಬ್ಬು ಬೇಕು ಎಂದು ಬರ್ತಾರೆ. ನಮಗೆ ಸರ್ಜರಿ ಮಾಡದೇ ವಿಧಿಯಿಲ್ಲ.

ಯುವತಿಯರು: ನನ್ನ ಗೆಳತಿಯರು ನೀನು ಹುಡುಗನ ಥರ ಇದೀಯ ಅಂತ ಅಣಕಿಸುತ್ತಿದ್ರು. ಸರ್ಜರಿ ನಂತರ ನಾನೂ ಮಾಡೆಲ್ ಅನಿಸುತ್ತಿದೆ. ಆನ್ ಲೈನ್ ನಲ್ಲಿ ಡಿಸ್ಕೌಂಟ್ ಆಫರ್ ಕೂಡ ಸಿಗುತ್ತದೆ. ಸರ್ಜರಿ ಆದ ನಂತರ ಕಾಲ್ಫಿಡೆನ್ಸ್ ಹೆಚ್ಚಿದೆ. ಸೆಲ್ಫೀಯಲ್ಲಿ ಬಾಲಿವುಡ್ ನಾಯಕಿಯರು ಮಾತ್ರವಲ್ಲ ನಾವೂ ಅವರಷ್ಟೇ ಚೆಂದ ಕಾಣಿಸಬಲ್ಲೆವು ಎಂದು ಸರ್ಜರಿ ಮಾಡಿಸಿಕೊಂಡೆ.

ಯುವಕರು: ಕೆಳದವಡೆ ಮೊನಚಾಗಿ ಕಂಡರೆ, ಕೆನ್ನೆ ಭಾಗ ಒಳಗೆಳೆದುಕೊಂಡಿದ್ದರೆ, ಟಫ್ ಲುಕ್ ಬರುತ್ತದೆ. ಫೋಟೋದಲ್ಲಿ ಹಾಟ್ ಆಗಿ ಕಾಣಿಸ್ತೇವೆ. ಏನೇನಕ್ಕೋ ಹಣ ಸುರಿತೀವಿ. ಇದೇನು ಮಹಾ ಅಂತಾರೆ.

ದುಬಾರಿ ವ್ಯವಹಾರ

ತುಟಿಯ ಸರ್ಜರಿ-15,000-30,000

ಹುಬ್ಬು ಎತ್ತಿಸುವುದು-2000-10000

ಕೆನ್ನೆಯ ಸರ್ಜರಿ-80000-140000

ಮೂಗಿನ ಅಂದ ಹೆಚ್ಚಿಸುವಿಕೆ-1500-8000

ದವಡೆ ಸರಿಪಡಿಸುವಿಕೆ- 5000-150000

Write A Comment