ಅಂತರಾಷ್ಟ್ರೀಯ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಗುಂಡೇಟಿಗೆ ಬಲಿ; ಐಫೋನ್‌ಗಾಗಿ ಶೂಟೌಟ್

Pinterest LinkedIn Tumblr

shootout

ಹೈರಾಬಾದ್: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಗುಂಡೇಟಿಗೆ ಬಲಿಯಾಗಿದ್ದಾನೆ. ಐಫೋನ್ ಕೊಡಲಿಲ್ಲವೆಂಬ ಕಾರಣಕ್ಕೆ ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದ ಘಟನೆ ಫ್ಲೋರಿಡಾದಲ್ಲಿ ಭಾನುವಾರ ನಡೆದಿದೆ.

ಹೈದರಾಬಾದ್‌ನ ಸಾಯಿ ಕಿರಣ್ ಮೃತ ದುರ್ದೈವಿ. ಒಂದುವರೆ ವರ್ಷದ ಹಿಂದಷ್ಟೇ ಅಮೆರಿಕಕ್ಕೆ ತೆರಳಿದ್ದ 23 ವರ್ಷದ ಕಿರಣ್ ಫ್ಲೋರಿಡಾದಲ್ಲಿ ವಾಸವಿದ್ದ. ಕಿರಣ್ ತನ್ನ ಮನೆಯ ಬಳಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಎದುರಾದ ಅಪರಿಚಿತ ವ್ಯಕ್ತಿಗಳು ಆತನ ಫೋನ್ ಕೊಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ಕಿರಣ್ ನಿರಾಕರಿಸಿದ್ದರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಅಮೆರಿಕದಲ್ಲಿರುವ ಕಿರಣ್ ಸ್ನೇಹಿತರು ತಮಗೆ ಆತನ ಸಾವಿನ ವಿಷಯ ತಿಳಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕಾಗಿ ಕಿರಣ್ ಮೃತದೇಹ ಹಸ್ತಾಂತರಕ್ಕೆ ಅಮೆರಿಕದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಕಿರಣ್ ಸಂಬಂಧಿಕರು ತಿಳಿಸಿದ್ದಾರೆ. ಈ ಘಟನೆಯೊಂದಿಗೆ ಅಮೆರಿಕದಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ಭಾರಿ ಆಘಾತಕ್ಕೆ ಒಳಗಾಗಿದ್ದು, ತಮ್ಮ ರಕ್ಷಣೆ ಮತ್ತು ಸುರಕ್ಷತೆ ವಿಷಯವಾಗಿ ಕಳವಳಗೊಂಡಿದ್ದಾರೆ.

Write A Comment