ಮನೋರಂಜನೆ

ಲಲಿತ್ ಮೋದಿ ವಿವಾದ: ಸುಷ್ಮಾ ಸ್ವರಾಜ್‌ ಬೆಂಬಲಿಸಿದ ಆರೆಸ್ಸೆಸ್

Pinterest LinkedIn Tumblr

lalit modi

ನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ನೆರವಾದ ಆರೋಪದಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿರುವ ಸಂದರ್ಭದಲ್ಲಿ ಆರೆಸ್ಸೆಸ್ ಸ್ವರಾಜ್‌ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಲಲಿತ್ ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್, ಸುಷ್ಮಾ ಸ್ವರಾಜ್ ಯಾವತ್ತೂ ರಾಷ್ಟ್ರೀಯತೆ ಮತ್ತು ದೇಶಭಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸುಷ್ಮಾ ಸ್ವರಾಜ್‌ ಅವರಲ್ಲಿ ಮೌನವೀಯ. ಮೌಲ್ಯ.ಗಳು ತುಂಬಿ ತುಳುಕುತ್ತಿವೆ. ಮಾನವೀಯತೆ ಮೌಲ್ಯಗಳ ಸಿದ್ಧಾಂತದಂತೆ ಅವರ ನಡೆ ನುಡಿಯಿರುತ್ತದೆ. ಸುಷ್ಮಾರನ್ನು ಟೀಕಿಸುವ ವ್ಯಕ್ತಿಗಳು ತಮ್ಮ ಆತ್ಮ ಶೋಧನೆ ಮಾಡಿಕೊಳ್ಳಲಿ ಎಂದು ವಿಪಕ್ಷಗಳ ನಾಯಕರಿಗೆ ಇಂದ್ರೇಶ್
ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Write A Comment