ರಾಷ್ಟ್ರೀಯ

ಪತ್ರಕರ್ತನ ಹತ್ಯೆ: ಆರೋಪಿ ಸಚಿವನ ವಜಾಕ್ಕೆ ಎಸ್‌ಪಿ ಮುಖಂಡರಲ್ಲಿ ಭಿನ್ನಾಭಿಪ್ರಾಯ

Pinterest LinkedIn Tumblr

1424246455-0195

ಲಕ್ನೋ: ಪತ್ರಕರ್ತರೊಬ್ಬರ ಕ್ರೂರ ಹತ್ಯೆಯಲ್ಲಿ ಆರೋಪಿಯಾಗಿರುವ ಸಚಿವ ರಾಮಮೂರ್ತಿ ಸಿಂಗ್ ಸಂಪುಟದಿಂದ ವಜಾಗೊಳಿಸುವ ಕುರಿತಂತೆ ಸಚಿವ ಸಂಪುಟದಲ್ಲಿಯೇ ಭಿನ್ನಮತ ಉಲ್ಬಣಿಸಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್, ಆರೋಪಿ ಸಚಿವ ವರ್ಮಾ ಅವರನ್ನು ವಜಾಗೊಳಿಸಲು ಸಿದ್ದರಾಗಿದ್ದರೂ ಕೂಡಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿರೋಧಿಸಿದ್ದಾರೆ ಎನ್ನಲಾಗಿದೆ.

ಅತಿ ಹೆಚ್ಚಿನ ಜನಸಂಖ್ಯೆಯಲ್ಲಿರುವ ಕುಮ್ಮಿ ಸಮುದಾಯಕ್ಕೆ ಸೇರಿದ ಸಚಿವ ವರ್ಮಾ, ಕೆಲ ಜಿಲ್ಲೆಗಳಲ್ಲಿ ತುಂಬಾ ಪ್ರಭಾವಿಯಾಗಿದ್ದರಿಂದ ಒಂದು ವೇಳೆ ಅವರನ್ನು ಸಂಪುಟದಿಂದ ವಜಾಗೊಳಿಸಿದಲ್ಲಿ ಬಂಡಾಯ ಅಭ್ಯರ್ಥಿಯಾಗಬಹುದು ಎಂದು ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಶಹಜಾಹಾನ್‌ಪುರ್ ಜಿಲ್ಲೆ ಸೇರಿದಂತೆ ನೆರೆಯ ಕೆಲ ಜಿಲ್ಲೆಗಳಲ್ಲಿ ಕುಮ್ಮು ಜಾತಿಯ ಜನ ತುಂಬಾ ಪ್ರಭಾವಶಾಲಿಯಾಗಿದ್ದರಿಂದ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಪಕ್ಷ ಸಿದ್ದವಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡರು ತಿಳಿಸಿದ್ದಾರೆ.

Write A Comment