ಅಂತರಾಷ್ಟ್ರೀಯ

‘ಕಾಶ್ಮೀರಕ್ಕಾಗಿ ಯಾವ ಬೆಲೆ ತೆರಲೂ ಸಿದ್ಧ’

Pinterest LinkedIn Tumblr

Raheel

ಇಸ್ಲಾಮಾಬಾದ್ (ಪಿಟಿಐ): ‘ಕಾಶ್ಮೀರಕ್ಕಾಗಿ ಪಾಕಿಸ್ತಾನವು ಯಾವ ಬೆಲೆಯನ್ನಾದರೂ ತೆರಲೂ ಸಿದ್ಧವಿದೆ’ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಹೇಳಿದ್ದಾರೆ.

ಶನಿವಾರ ಇಲ್ಲಿನ ನೌಕಾ ತರಬೇತಿ ಕೇಂದ್ರದಲ್ಲಿ ನಡೆದ ನಿರ್ಗಮನ ಪಥ ಸಂಚಲನ ಉದ್ದೇಶಿಸಿ ಅವರು ಮಾತನಾಡಿದರು.

‘ರಾಷ್ಟ್ರದ ಹಿತಾಸಕ್ತಿ ರಕ್ಷಣೆ, ಕಾಶ್ಮೀರವನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಮತ್ತು ಹೊಸ ಬಂದರುಗಳ ಅಭಿವೃದ್ಧಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂಶೋಧನೆಗೆ ಯಾವ ಬೆಲೆ ತೆರಲೂ ಪಾಕಿಸ್ತಾನ ಸಿದ್ಧವಾಗಿದೆ’ ಎಂದು ಷರೀಫ್ ಹೇಳಿದ್ದಾರೆ.

* ಕದನ ವಿರಾಮ ಉಲ್ಲಂಘನೆ, ಬಲೂ ಚಿಸ್ತಾನ ಮತ್ತು ಕರಾಚಿಯಲ್ಲಿ ನಡೆಯುತ್ತಿರುವ ರಕ್ತಪಾತ, ಎದುರಾಳಿಗಳ ಪೈಶಾಚಿಕ ಮನಸ್ಥಿತಿ ತೋರಿಸುತ್ತದೆ
-ರಹೀಲ್ ಷರೀಫ್, ಪಾಕಿಸ್ತಾನದ ಸೇನಾ ಮುಖ್ಯಸ್ಥ

Write A Comment