ಅಂತರಾಷ್ಟ್ರೀಯ

ಇದಕ್ಕಿಂತಲೂ ಕಪ್ಪಾದ ಶಿಶುವೊಂದು ಈ ಭೂ ಮಂಡಲದಲ್ಲಿ ಇರಲು ಸಾಧ್ಯವೇ ? ನಿಜವೋ ಸುಳ್ಳೋ? ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ ಭಾರೀ ಚರ್ಚೆ

Pinterest LinkedIn Tumblr

worlds-darkest-baby

ನವದೆಹಲಿ, ಜೂ.13: ಅಂತರ್ಜಾಲ ಪ್ರಪಂಚದಲ್ಲಿ ಈಗ ಅದೆಷ್ಟು ಹುಚ್ಚು ದರ್ಬಾರ್ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇನ್ನು ವಾಟ್ಸಪ್ ಬಂದ ಮೇಲಂತೂ ಕೇಳುವುದೇ ಬೇಡ. ಕೋತಿಗೆ ಹೆಂಡ ಕುಡಿಸಿದ ಪರಿಯೇ ಸರಿ. ಇತ್ತೀಚೆಗೆ ಅಂತರ್ಜಾಲದಲ್ಲಿ ಮಗುವೊಂದರ ಚಿತ್ರ ಹರಿಯಲಾರಂಭಿಸಿದೆ.

ದಕ್ಷಿಣ ಆಫ್ರಿಕಾದ ಈ ಮಗು ವಿಶ್ವದಲ್ಲೇ ಅತ್ಯಂತ ಕಡುಕಪ್ಪಿನ ಬೇಬಿ ಎಂಬ ಪ್ರತೀತಿಯೊಂದಿಗೆ ಮಗು ಚಿತ್ರ ವಿಶ್ವದಾದ್ಯಂತ ವೈರಾಣುವಿನಂತೆ ಹಬ್ಬಿದೆ. ಇನ್ನು ಇದಕ್ಕಿಂತಲೂ ಕಪ್ಪಾದ ಶಿಶುವೊಂದು ಈ ಭೂ ಮಂಡಲದಲ್ಲಿ ಇರಲು ಸಾಧ್ಯವೇ ಇಲ್ಲ ಎಂಬುವುದು ಈ ಫೋಟೊ ಹರಿಯಬಿಟ್ಟವನ ಹೇಳಿಕೆ.

ನಿಜಕ್ಕೂ ಚಿತ್ರ ನೋಡಿದರೆ ಅದು ಸತ್ಯ ಕೂಡ. ಕರೀ ದೇಹ, ಮುಖ, ಮೊಗದಲ್ಲಿ ಮಿರಿಮಿರಿ ಮಿಂಚುವ ಕಪ್ಪು ಕಣ್ಣುಗಳು. ನೋಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತರೆ. ದಿನದಿಂದ ದಿನಕ್ಕೆ ಜನರಲ್ಲಿ ಈ ಮಗುವಿನ ಬಗ್ಗೆ ಕುತೂಹಲ ಮೂಡುತ್ತಿದೆ. ನೋಡುವ ಕಾತರ ಹೆಚ್ಚುತ್ತಿದೆ. ವಿಡಿಯೋ ಹರಿದಾಟವೂ ಜ್ವರದಂತೆ ಏರುತ್ತಿದೆ. ಎಲ್ಲ ಸರಿಯೇ… ಆದರೆ ಇದು ನಿಜವಾಗಿಯೂ ಅಸ್ತಿತ್ವರದಲ್ಲಿರುವ ಮಾನವ ಶಿಶುವೇ ಅಥವಾ ಮಗುವನ್ನು ಹೋಲುವ ಗೊಂಬೆಯೇ(ಬೇಬಿ ಡಾಲ್) ಎಂಬುವುದು ಈತ ಎಲ್ಲರ ತಲೆ ತಿನ್ನುವ ಪ್ರಶ್ನೆ. ಈ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.

Write A Comment