ಅಂತರಾಷ್ಟ್ರೀಯ

ಅಫ್ಘಾನ್: ರಾಷ್ಟ್ರ ತೊರೆಯಲು ಸಿಖ್ಖರ ಮೇಲೆ ಒತ್ತಡ

Pinterest LinkedIn Tumblr

sikh

ಕಾಬೂಲ್, ಜೂ.11: ಒಂದು ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಪ್ರವರ್ಧಮಾನ ಕಂಡಿದ್ದ ಸಿಖ್ ಸಮುದಾಯವು ಪ್ರಸಕ್ತ ಪತನದಂಚಿಗೆ ಸಾಗುತ್ತಿರುವ ಸೂಚನೆಗಳು ಕಂಡು ಬಂದಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ತಮ್ಮ ವಿರುದ್ಧ ಅಸಹನೆ ಹಾಗೂ ತಾರತಮ್ಯ ಅಧಿಕಗೊಳ್ಳುತ್ತಿದೆ ಎಂದು ಆರೋಪಿಸುತ್ತಿರುವ ಅಫ್ಘಾನಿಸ್ತಾನದಲ್ಲೇ ಹುಟ್ಟಿ ಬೆಳೆದಿರುವ ಸಿಖ್ಖರು ರಾಷ್ಟ್ರವನ್ನು ತೊರೆಯುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

1990ರ ಅವಧಿಯಲ್ಲಿ ಒಂದು ಲಕ್ಷದಷ್ಟಿದ್ದ ಅಫ್ಘಾನಿಸ್ತಾನದ ಸಿಖ್ಖರ ಸಂಖ್ಯೆಯು ಪ್ರಸಕ್ತ 2,500ಕ್ಕೆ ಇಳಿದಿರುವುದಾಗಿ ಅಂದಾಜಿಸಲಾಗಿದೆ. ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಾದ ಸಿಖ್ಖರ ಮೇಲೆ ಬಹುಸಂಖ್ಯಾತರಿಂದ ಉಂಟಾಗುತ್ತಿರುವ ಒತ್ತಡ ಹೆಚ್ಚುತ್ತಿರುವುದಾಗಿ ಸಿಖ್ ಸಮುದಾಯವರು ದೂರಿದ್ದಾರೆ.

‘‘ನಾವಿನ್ನು ಇಲ್ಲಿ ಹೆಚ್ಚು ಕಾಲ ನೆಲೆಸುವ ಹಾಗಿಲ್ಲ. ರಾಷ್ಟ್ರವನ್ನು ತೊರೆಯಲು ಅಶಕ್ತರಾಗಿರುವ ಸಿಖ್ಖರು ಮಾತ್ರವೇ ಈಗ ರಾಷ್ಟ್ರದಲ್ಲಿ ಉಳಿಯುವಂತಾಗಿದೆ.’’ ಎಂದು 23ರ ಹರೆಯದ ಔಷಧಿ ವ್ಯಾಪಾರಿ ಚರಣ್‌ಸಿಂಗ್ ಅಭಿಪ್ರಾಯಿಸುತ್ತಾರೆ.

Write A Comment