ಅಂತರಾಷ್ಟ್ರೀಯ

ಸಿಂಗಾಪುರದಲ್ಲಿ ಅವಧಿ ಮೀರಿ ವಾಸ್ತವ್ಯ; ಭಾರತೀಯರು ಸೇರಿ 26 ಮಂದಿಯ ಬಂಧನ

Pinterest LinkedIn Tumblr

Singapore21

ಸಿಂಗಾಪುರ, ಜೂ.11: ಅನುಮತಿ ನೀಡಲಾಗಿರುವ ಅವಧಿಗೂ ಮೀರಿ ರಾಷ್ಟ್ರದಲ್ಲಿ ನೆಲೆಸಿದ್ದ ಚೀನಾ ಹಾಗೂ ಭಾರತದ ಪ್ರಜೆಗಳು ಸೇರಿದಂತೆ 26 ಮಂದಿಯನ್ನು ವಲಸೆ ನೀತಿ ಉಲ್ಲಂಘನೆ ಆರೋಪದಡಿ ಸಿಂಗಾಪುರದ ಅಧಿಕಾರಿಗಳು ಬಂಧಿಸಿದ್ದಾರೆ.

ವಲಸೆ ಹಾಗೂ ತಪಾಸಣಾ ಠಾಣೆ ಪ್ರಾಧಿಕಾರ(ಐಸಿಎ)ದ ಅಧಿಕಾರಿಗಳು ಮಂಗಳವಾರ ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಸಿಂಗಾಪುರದ ವಲಸೆ ಕಾಯ್ದೆಯ ಪ್ರಕಾರ ರಾಷ್ಟ್ರದಲ್ಲಿ ಅವಧಿ ಮೀರಿದ ವಾಸ್ತವ್ಯ ಹಾಗೂ ಅಕ್ರಮ ಪ್ರವೇಶಗೈದವರಿಗೆ ಗರಿಷ್ಠ ಆರು ತಿಂಗಳ ಜೈಲು ಹಾಗೂ ಕನಿಷ್ಠ ಮೂರು ಛಡಿಯೇಟು ನೀಡಲಾಗುತ್ತದೆ. ಅದೇ ರೀತಿ ಅಕ್ರಮ ನಿರ್ಗಮನಕ್ಕೆ 2 ಸಾವಿರ ಡಾಲರ್‌ಗಳವರೆಗಿನ ದಂಡ, ಗರಿಷ್ಠ ಆರು ತಿಂಗಳು ಜೈಲು ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಅವಧಿ ಮೀರಿ ರಾಷ್ಟ್ರದಲ್ಲಿ ತಂಗಿರುವ ಆರೋಪದಡಿ ಬಂಧನಕ್ಕೊಳಗಾದವರಲ್ಲಿ 26ರಿಂದ 62 ವರ್ಷಗಳ ನಡುವಿನ ಪ್ರಾಯದವರಿದ್ದಾರೆ ಎಂದು ಐಸಿಎ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ಬಂಧನಕ್ಕೊಳಗಾಗಿರುವ ಭಾರತೀಯರು ಹಾಗೂ ಚೀನೀ ಪ್ರಜೆಗಳ ನಿಖರ ಸಂಖ್ಯೆಯನ್ನು ಅಧಿಕಾರಿಗಳು ತಿಳಿಸಿಲ್ಲವೆನ್ನಲಾಗಿದೆ.

Write A Comment