ಅಂತರಾಷ್ಟ್ರೀಯ

ಸಿಂಗಾಪುರ: ಭಾರತೀಯ ಮೂಲದ ವೈದ್ಯೆಗೆ ದಂಡ

Pinterest LinkedIn Tumblr

doctor

ಸಿಂಗಾಪುರ, ಜೂ.11: ಸಿಂಗಾಪುರ್ ಜನರಲ್ ಹಾಸ್ಪಿಟಲ್‌ನಲ್ಲಿ 2012ರಲ್ಲಿ ಕ್ಯಾನ್ಸರ್ ರೋಗಿಯೊಬ್ಬರಿಗೆ ಅಸಮರ್ಪಕವಾಗಿ ಚುಚ್ಚುಮದ್ದು ನೀಡಿದ್ದ 32ರ ಹರೆಯದ ಭಾರತೀಯ ಮೂಲದ ವೈದ್ಯೆ ಡಾ. ಕರುಣಾಮೂರ್ತಿ ಕವಿತಾ ಅವರಿಗೆ ಸಿಂಗಾಪುರ ಮೆಡಿಕಲ್ ಕೌನ್ಸಿಲ್ 2 ಸಾವಿರ ಡಾಲರ್‌ಗಳ ದಂಡ ವಿಧಿಸಿದೆ.

ರೋಗಿಯ ರಕ್ತನಾಳಕ್ಕೆ ನೀಡಬೇಕಾಗಿದ್ದ ಚುಚ್ಚುಮದ್ದನ್ನು ಡಾ. ಕವಿತಾ ಅವರು ಸ್ಪೈನಲ್ ಕ್ಯಾನಲ್‌ಗೆ ನೀಡಿ ಪ್ರಮಾದವೆಸಗಿದ್ದರು. ತತ್ಪರಿಣಾಮವಾಗಿ ರೋಗಿಗೆ ತೀವ್ರ ಸ್ವರೂಪದ ನರಮಂಡಲ ಸಮಸ್ಯೆಗಳು ಉಂಟಾಗಿ ಅಂತಿಮವಾಗಿ ಆತನ ಸಾವಿಗೆ ಕಾರಣವಾಗಿತ್ತು.

ಡಾ. ಕವಿತಾರಿಗೆ ತಾನೆಸಗಿದ ತಪ್ಪು ತಕ್ಷಣವೇ ಅರಿವಿಗೆ ಬಂದು ಆಸ್ಪತ್ರೆಯ ಹಿರಿಯ ವೈದ್ಯರಿಗೆ ಹಾಗೂ ಅಧಿಕಾರಿಗಳ ನೆರವಿನಿಂದ ತಪ್ಪು ಸರಿಪಡಿಸಲು ಪ್ರಯತ್ನಿಸಿದ್ದರು. ವೈದ್ಯೆಯಿಂದಾದ ಪ್ರಮಾದವನ್ನು ಮೊದಲನೆ ಮಟ್ಟದ ನಿರ್ಲಕ್ಷಕ್ಕೆ ಸೀಮಿತಗೊಳಿಸಿ ಆಕೆಯ ತಪ್ಪಿಗೆ 2 ಸಾವಿರ ಡಾಲರ್‌ಗಳ ದಂಡವನ್ನು ಮಾತ್ರ ವಿಧಿಸಲಾಗುವುದು ಎಂದು ಸಿಂಗಾಪುರ ಮೆಡಿಕಲ್ ಕೌನ್ಸಿಲ್‌ನ ಮೂಲಗಳು ತಿಳಿಸಿವೆ.

Write A Comment