ಅಂತರಾಷ್ಟ್ರೀಯ

ಅತ್ಯಾಚಾರ ಪ್ರಕರಣ; ನಿವೃತ್ತ ಭಾರತೀಯ ಪೊಲೀಸ್ ಅಧಿಕಾರಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ

Pinterest LinkedIn Tumblr

Jail

ವಾಷಿಂಗ್ಟನ್,ಜೂ.10: ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಭಾರತ ಮೂಲದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಇಲ್ಲಿನ ನ್ಯಾಯಾಲಯ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ವೋರ್ಸೆಸ್ಟರ್ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದ ಮೊಟ್ಟ ಮೊದಲ ಭಾರತೀಯನಾಗಿದ್ದ ರಜತ್ ಶರ್ದಾ ಅತ್ಯಾಚಾರಿ ಎಂದು ನ್ಯಾಯಾಧೀಶ ಡೇವಿಡ್ ರೆಸ್ಸಿಯಾರ್ಡೋನ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಆದರೆ, ನನ್ನ ಕಕ್ಷಿದಾರ ಅಮಾಯಕ. ಅವನು ಅತ್ಯಾಚಾರ ಮಾಡಿಲ್ಲ. ಅತ್ಯಂತ ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯಿರುವ ಈ ವ್ಯಕ್ತಿ ಅತ್ಯಾಚಾರದಂಥ ಕೃತ್ಯ ಎಸಗಲು ಸಾಧ್ಯವಿಲ್ಲ. ಆದ್ದರಿಂದ ನಾನು ನ್ಯಾಯಾಲಯದ ಈ ತೀರ್ಪುನ್ನು ಒಪ್ಪುವುದಿಲ್ಲ ಎಂದು ಶರ್ದಾ ಪರ ವಕೀಲ ಪೀಟರ್ ಎಲ್ ಎಟಿನ್‌ಬರ್ಗ್ ಹೇಳಿದ್ದಾರೆ.

Write A Comment