ಅಂತರಾಷ್ಟ್ರೀಯ

ವಾಜಪೇಯಿ ಪರವಾಗಿ ಬಾಂಗ್ಲಾ ಸರ್ಕಾರದಿಂದ ‘ಲಿಬರೇಶನ್ ಆಫ್ ವಾರ್’ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

pm-modi-bangladesh-award

ಢಾಕಾ: ಬಾಂಗ್ಲಾದೇಶದ ಪರಮೋಚ್ಛ ಗೌರವವಾದ ’ಲಿಬರೇಶನ್ ವಾರ್’ ಗೌರವ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರು ಭಾನುವಾರ ಬಾಂಗ್ಲಾಭವನದಲ್ಲಿ ಪ್ರದಾನ ಮಾಡಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ’ಈದಿನವು ಭಾರತೀಯರಿಗೆ ಹೆಮ್ಮೆಯ ದಿನ. ನನ್ನಂತಹ ಹಲವಾರು ಮಂದಿಗೆ ಸ್ಪೂರ್ತಿ ನೀಡಿದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಾಂಗ್ಲಾದೇಶ ಗೌರವಿಸುತ್ತಿದೆ. ಅಟಲ್​ಜಿ ಅವರು ಆರೋಗ್ಯವಂತರಾಗಿದ್ದಲ್ಲಿ ಅವರು ಈ ಹೊತ್ತಿನಲ್ಲಿ ಇಲ್ಲಿ ಇರುತ್ತಿದ್ದರು, ಆಗಿನ ಸಂಭ್ರಮವೇ ಬೇರೆಯಾಗಿರುತ್ತಿತ್ತು’ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.

ಇದು ರಾಷ್ಟ್ರದ ಗೆಳೆಯನಿಗೆ ನೀಡಲಾಗುತ್ತಿರುವ ಗೌರವ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದರು. ಬಾಂಗ್ಲಾದೇಶದಲ್ಲಿ ತಮ್ಮ ಎರಡನೇ ದಿನದ ಪ್ರವಾಸವನ್ನು ಢಾಕಾದ ಧಾಕೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದ ಪ್ರಧಾನಿ ಮೋದಿ ಬಳಿಕ ರಾಮಕೃಷ್ಣ ಮಿಷನ್​ಗೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೋದಿಯವರು ಢಾಕಾದ ನ್ಯೂ ಚಾನ್ಸರಿ ಕಾಂಪ್ಲೆಕ್ಸ್​ನಲ್ಲಿ ಗ್ರಾಂಟ್-ಇನ್-ಏಡ್ ಯೋಜನೆಗಳ ಫಲಕಗಳನ್ನು ಅನಾವರಣಗೊಳಿಸಿದರು.

Write A Comment