ಅಂತರಾಷ್ಟ್ರೀಯ

ಬಾಂಗ್ಲಾ ಪ್ರವಾಸ: ಢಾಕಾಗೆ ಬಂದಿಳಿದ ಮೋದಿ

Pinterest LinkedIn Tumblr

modi

ನವದೆಹಲಿ/ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಬಾಂಗ್ಲಾದೇಶ ಭೇಟಿಯ ಸಲುವಾಗಿ ಶನಿವಾರ ಬೆಳಿಗ್ಗೆ ಢಾಕಾಗೆ ಬಂದಿಳಿದರು.

ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸ್ವಾಗತಿಸಿದರು.

ನವದೆಹಲಿಯಲ್ಲಿ ವಿಮಾನವೇರುವ ಮುನ್ನ ‘ಈ ಐತಿಹಾಸಿಕ ಭೇಟಿಯು ಉಭಯ ದೇಶಗಳ ಬಾಂಧವ್ಯವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಮತ್ತು ವಾಣಿಜ್ಯ ಸಹಕಾರವನ್ನು ಇನ್ನಷ್ಟು ಬಲಗೊಳಿಸುವ ನಿರೀಕ್ಷೆ ಇದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಮೋದಿ ಅವರು, ಶೇಖ್ ಹಸೀನಾ ಅವರೊಂದಿಗೆ ವ್ಯಾಪಾರ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ತೀಸ್ತಾ ನೀರು ಹಂಚಿಕೆ ವಿವಾದವೂ ಚರ್ಚೆಗೆ ಒಳಪಡುವ ನಿರೀಕ್ಷೆ ಇದೆ. ರೈಲು, ರಸ್ತೆ ಮತ್ತು ನೀರು ಸಂಪರ್ಕ, ಆರ್ಥಿಕ ಚಟುವಟಿಕೆಗಳ ವೃದ್ಧಿ ಮತ್ತು ಭದ್ರತಾ ಸಹಕಾರದ ವಿಸ್ತರಣೆ ಚರ್ಚೆಗೆ ಒಳಗಾಗುವ ಪ್ರಮುಖ ವಿಷಯಗಳಾಗಲಿವೆ. ಸುಮಾರು 20 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Write A Comment