ರಾಷ್ಟ್ರೀಯ

ಪಾಸ್‌ಪೊರ್ಟ್‌ಗಾಗಿ ಭಾರತೀಯನಾದ ಗಿಲಾನಿ

Pinterest LinkedIn Tumblr

gilani

ಶ್ರೀನಗರ (ಪಿಟಿಐ):  ಕಾಶ್ಮೀರದ ಪ್ರತ್ಯೇಕತಾವಾದಿ ಹಾಗೂ ಹುರಿಯತ್‌ ನಾಯಕ ಸೈಯದ್‌ ಅಲಿ ಗಿಲಾನಿ ಅವರು ಪಾಸ್‌ಪೊರ್ಟ್‌ಗಾಗಿ ಭಾರತೀಯ ಪೌರತ್ವ ಒಪ್ಪಿಕೊಂಡಿದ್ದಾರೆ.

ಇಂದು ಶ್ರೀನಗರದಲ್ಲಿರುವ ಪಾಸ್‌ಪೊರ್ಟ್‌ ಕಚೇರಿಗೆ ಬೇಟಿ ನೀಡಿದ ಗಿಲಾನಿ ಅವರು ಪಾಸ್‌ಪೊರ್ಟ್‌ ಪಡೆಯಬೇಕಾದ ಎಲ್ಲಾ ವಿದಿ ವಿಧಾನಗಳನ್ನು ಪೂರೈಸಿದರು. ಬಯೋಮೆಟ್ರಿಕ್‌ ಮತ್ತು  ಬೆರಳಚ್ಚು ಮಾದರಿಯನ್ನು ನೀಡಿದರು.

ಪಾಸ್‌ಪೊರ್ಟ್‌ ಅರ್ಜಿಯಲ್ಲಿರುವ ರಾಷ್ಟ್ರೀಯತೆ ಕಾಲಂನಲ್ಲಿ ಭಾರತೀಯ ಎಂದು ಗಿಲಾನಿ ನಮೂದಿಸಿದ್ದಾರೆ. ನಾನು ಭಾರತದಲ್ಲಿ ಹುಟ್ಟಿಲ್ಲ, ಬಲವಂತಾಗಿ ಭಾರತೀಯನಾಗುತ್ತಿದ್ದೇನೆ. ವಿದೇಶ ಪ್ರವಾಸ ಕೈಗೊಳ್ಳುವ ಪ್ರತಿಯೊಬ್ಬ ಕಾಶ್ಮೀರಿಯು ಒತ್ತಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಗಿಲಾನಿ ತಿಳಿಸಿದ್ದಾರೆ.

88 ವರ್ಷದ ಗಿಲಾನಿ ಅವರು ಸೌದಿ ಅರೇಬಿಯದಲ್ಲಿರುವ ಮಗಳ ಮನೆಗೆ ತೆರಳುವ ಸಲುವಾಗಿ ಪಾಸ್‌ಪೊರ್ಟ್‌ ಮಾಡಿಸುತ್ತಿದ್ದಾರೆ.

Write A Comment