ರಾಷ್ಟ್ರೀಯ

ಮಕ್ಕಳನ್ನು ಸುಶಿಕ್ಷಿತ ಮಾಡುವ ನಿಟ್ಟಿನಲ್ಲಿ ಶಾಲೆಯನ್ನೇ ದತ್ತು ಪಡೆದು ನಡೆಸುತ್ತಿರುವ ವಾಟ್ಸಾಪ್ ಗ್ರೂಪ್ ಫ್ರೆಂಡ್ಸ್..!

Pinterest LinkedIn Tumblr

WhatsApp Friends kashmir

ಸಾಂಬಾ(ಕಾಶ್ಮೀರ), ಜೂ.2: ಸದಾ ಗುಂಡಿನ ಮೊರೆತ, ಸಾವು-ನೋವುಗಳೇ ತಾಂಡವವಾಡುವ ಜಮ್ಮು-ಕಾಶ್ಮೀರದಲ್ಲಿ ಮರಳುಗಾಡಿನ ಸರೋವರಗಳಂತೆ ಆಗಾಗ ಅಲ್ಲಲ್ಲಿ ಹೃದಯಕ್ಕೆ ಮುದ ನೀಡುವ ಪ್ರಸಂಗಗಳೂ ನಡೆಯುತ್ತಿರುತ್ತವೆ.

ಹಿಂಸೆಯ ನಡುವೆಯೇ ಅರಳುವ ಪ್ರೀತಿ, ಕರುಣೆಗಳಿಗೆ ಉದಾಹರಣೆ ಒಂದು ಶಾಲೆಯದು. ಜಮ್ಮುವಿನ ಹಿಂಸಾಗ್ರಸ್ತ ಸಾಂಬಾ ಜಿಲ್ಲೆಯ ಹಳ್ಳಿಯೊಂದರ ಈ ಶಾಲೆಯನ್ನು ಒಬ್ಬ ಪತ್ರಕರ್ತ ಹಾಗೂ ಅವನ ಸ್ನೇಹಿತರು ದತ್ತು ತೆಗೆದುಕೊಂಡಿದ್ದಾರೆ. ಸ್ನೇಹಿತರೆಂದರೆ ಇವರೆಲ್ಲ ವಾಟ್ಸಪ್ ಸ್ನೇಹಿತರ ಬಳಗವಿದು.

ಶಾಲೆಯಲ್ಲಿ 55 ಮಕ್ಕಳಿದ್ದು, ಈ ಶಾಲೆಯ ಎಲ್ಲ ಖಚು-ವೆಚ್ಚಗಳನ್ನು ಈ ಗೆಳೆಯರೇ ಸರಿದೂಗಿಸುತ್ತಾರೆ. ಶಾಲೆಯ ಅಗತ್ಯ ಕ್ರಮಗಳನ್ನು ಪೂರೈಸುತ್ತಾನೆ. ನಾವೆಲ್ಲರೂ ಮೊಬೈಲ್ ಸಂದೇಶಗಳ ಮೂಲಕ ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕೆಂದು ತೀರ್ಮಾನಿಸಿದೆವು. ಆಗ ನಮಗೆ ಹೊಳೆದಿದ್ದು ಶಾಲೆ ದತ್ತು ವಿಷಯ. ಆ ನಿಟ್ಟಿನಲ್ಲಿ ಮುಂದುವರಿದೆವು. ಈಗ ಶಾಲೆಯ ಸುಧಾರಣೆಯಾಗುತ್ತಿದೆ ಎನ್ನುತ್ತಾನೆ ಆ ಪತ್ರಕರ್ತ.

ನಮ್ಮ ಶಾಲೆಯಲ್ಲಿ 55 ಜನ ಮಕ್ಕಳಿದ್ದಾರೆ. ಈ ಶಾಲೆ ನಡೆಸುವುದು ನಿಜಕ್ಕೂ ನಮಗೆ ಭಾರೀ ಕಷ್ಟವಾಗಿತ್ತು. ಮಕ್ಕಳಿಗೆ ಶಿಕ್ಷಣ ನೀಡುವುದೇ ಅಸಾಧ್ಯವಾಗಿತ್ತು. ಈಗ ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ಪಾಠ ಮಾಡುವುದಕ್ಕೂ ಖುಷಿಯಾಗುತ್ತದೆ. ಮಕ್ಕಳೂ ಕೂಡ ಉತ್ಸಾಹದಿಂದ ಬರುತ್ತಾರೆ ಎಂಬುದು ಆ ಶಾಲೆ ಶಿಕ್ಷಕಿಯೊಬ್ಬರ ಸಮಾಧಾನದ ಮಾತು. ಹಾಗೇ ಆ ಗೆಳೆಯರ ಬಳಗಕ್ಕೆ ಧನ್ಯವಾದ ಹೇಳುವುದನ್ನು ಆಕೆ ಮರೆಯುವುದಿಲ್ಲ.

Write A Comment