ರಾಷ್ಟ್ರೀಯ

ಜು.15 ರಿಂದ ಬಿಎಸ್‌ಎನ್‌ಎಲ್ ‘ರೋಮಿಂಗ್ ಫ್ರೀ’

Pinterest LinkedIn Tumblr

bsnl

ನವದೆಹಲಿ, ಜೂ.2: ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ (ಬಿಎಸ್‌ಎನ್‌ಎಲ್) ಜುಲೈ 15 ರಿಂದ ಅಂತರರಾಜ್ಯ ಕರೆ ಸೇವೆಗಳ ಶುಲ್ಕವನ್ನು (ರೋಮಿಂಗ್‌ಫ್ರೀ) ತೆಗೆದು ಹಾಕಲಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಜುಲೈ 15 ರಿಂದ ದೇಶಾದ್ಯಂತ ಯಾವುದೇ ಮೂಲೆಗೆ ಕರೆ ಮಾಡಿದರೂ ಅದಕ್ಕೆ ರೋಮಿಂಗ್ ಚಾರ್ಜ್ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಬಿಎಸ್‌ಎನ್‌ಎಲ್‌ನ ಎಲ್ಲಾ ಸ್ಥಿರ ದೂರವಾಣಿ (ಲ್ಯಾಂಡ್‌ಲೈನ್) ಕರೆಗಳನ್ನು ರಾತ್ರಿ ವೇಳೆ ಉಚಿತವಾಗಿ ಮಾಡಬಹುದಾದ ಹೊಸ ಕೊಡುಗೆ ಯೊಂದನ್ನು ಕಳೆದ ತಿಂಗಳು ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ನೀಡಿತ್ತು.

ಲ್ಯಾಂಡ್‌ಲೈನ್ ದೂರವಾಣಿ ಯಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಯಾವುದೇ ಮೊಬೈಲ್, ಸ್ಥಿರ ದೂರವಾಣಿ ಅಥವಾ ಇಂಟರ್‌ನೆಟ್ ಬಳಕೆಗೆ ಯಾವುದೇ ರೀತಿಯ ಶುಲ್ಕ ರಹಿತ ಸೇವೆ ನೀಡುವ ಯೋಜನೆಯನ್ನು ಬಿಎಸ್‌ಎನ್‌ಎಲ್ ಮೇ ತಿಂಗಳಲ್ಲಿ ಗ್ರಾಹಕರಿಗೆ ಒದಗಿಸಿತ್ತು. ಕುಸಿಯುತ್ತಿರುವ ಬಿಎಸ್‌ಎನ್‌ಎಲ್ ಬೇಡಿಕೆಯನ್ನು ಹೆಚ್ಚಿಸಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಬಿಎಸ್‌ಎನ್‌ಎಲ್ ಈ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಈ ಯೋಜನೆ ಮೇ 1 ರಿಂದ ಜಾರಿಗೆ ಬಂದಿತ್ತು. ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಏರ್‌ಟೆಲ್ ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಬಿಎಸ್‌ಎನ್‌ಎಲ್ ಸಂಸ್ಥೆ ಗಣನೀಯವಾಗಿ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.

Write A Comment