ಅಂತರಾಷ್ಟ್ರೀಯ

ಅಮೆರಿಕ: ಸ್ಪೆಲ್ಲಿಂಗ್ ಬೀ ಸ್ಪರ್ಧೆ ಟೈಯಲ್ಲಿ ಅಂತ್ಯಜಂಟಿ ವಿಜೇತರಾದ ಭಾರತೀಯ ಮೂಲದ(ಮೈಸೂರು ಮೂಲದ) ವಿದ್ಯಾರ್ಥಿಗಳು

Pinterest LinkedIn Tumblr

com

ನ್ಯೂಯಾರ್ಕ್, ಮೇ 29: ಭಾರೀ ಕುತೂಹಲ ಮೂಡಿಸಿದ್ದ ಅಮೆರಿಕದ ‘ನ್ಯಾಶನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆ’ಯು ‘ಟೈ’ಯಲ್ಲಿ ಮುಕ್ತಾಯಗೊಂಡಿದ್ದು, ಭಾರತೀಯ ಮೂಲದ ವಿದ್ಯಾರ್ಥಿಗಳಾದ ವನ್ಯಾ ಶಿವಶಂಕರ್ ಹಾಗೂ ಗೋಕುಲ್ ವೆಂಕಟಾಚಲಂ ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮೈಸೂರು ಮೂಲದ ವನ್ಯಾ ವಿಜೇತೆ.

ಕಳೆದ ವರ್ಷದಂತೆಯೇ ಈ ಬಾರಿ ಕೂಡಾ ಸ್ಪರ್ಧೆಯು ಟೈನಲ್ಲಿ ಕೊನೆಗೊಂಡಿದ್ದು, 13 ವರ್ಷದ ವನ್ಯಾಶಿವಶಂಕರ್ ಹಾಗೂ 14 ವರ್ಷದ ಗೋಕುಲ್ ವೆಂಕಟಾಚಲಂ ಜಂಟಿಯಾಗಿ ಚಿನ್ನದ ಟ್ರೋಫಿ ಗಳಿಸಿದ್ದಾರೆ.

ಈ ಬಾರಿಯ ಜಂಟಿ ಪ್ರಥಮ ಸ್ಥಾನದಲ್ಲಿರುವ ವನ್ಯಾ ಶಿವಶಂಕರ್ 2009ರಲ್ಲಿ ನಡೆದಿದ್ದ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದ ಕಾವ್ಯ ಶಿವಶಂಕರ್ ಅವರ ಸೋದರಿಯಾಗಿದ್ದಾರೆ.

ಅಮೆರಿಕದ ಚೆಸ್ಟರ್‌ಫೀಲ್ಡ್ ನಿವಾಸಿ ಗೋಕುಲ್ ವೆಂಕಟಾಚಲಂ ಅವರಿಗೂ ಇದು ಕೊನೆಯ ಅವಕಾಶವಾಗಿತ್ತು. ಇಬ್ಬರು ಸ್ಪರ್ಧಾಳುಗಳು ಕೂಡಾ ಐದನೆ ಬಾರಿ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ವನ್ಯಾ ಶಿವಶಂಕರ್ ಅದನ್ನು ತನ್ನ ಅಜ್ಜಿಗೆ ಸಮರ್ಪಿಸಿದ್ದಾಳೆ.

‘‘ಕಠಿಣ ಪರಿಶ್ರಮ ನನ್ನ ಸಾಧನೆಗೆ ಕಾರಣವಾಯಿತು. ಕೊನೆಯ ಸುತ್ತಿನ ಪ್ರಾರಂಭದಲ್ಲಿ ನಾನು ಸ್ವಲ್ಪ ಮಟ್ಟಿಗೆ ಆತ್ಮ ವಿಶ್ವಾಸ ಕಳೆದುಕೊಂಡಿದ್ದೆ. ಕೊನೆಕೊನೆಗೆ ಸ್ಪರ್ಧೆಯಲ್ಲಿ ಗಂಭೀರವಾದೆ’’ ಎಂದು ಗೋಕುಲ್ ವಿವರಿಸಿದ್ದಾರೆ.

ಅಂತಿಮ ಸುತ್ತಿನಲ್ಲಿ ವನ್ಯಾ ಹಾಗೂ ಗೋಕುಲ್ ನಡುವೆ ಹತ್ತು ಪ್ರಶ್ನಾವಳಿ ನಡೆದವು. ಆದರೆ ಅಂತಿಮವಾಗಿ ಇಬ್ಬರೂ ಒಂದೊಂದು ಪದದ ಅರ್ಥ ವಿವರಣೆ ನೀಡಲು ಸಾಧ್ಯವಾಗದ ಕಾರಣ ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡರು ಎಂದು ವರದಿ ತಿಳಿಸಿದೆ. ಅಂತಿಮ ಸುತ್ತು ವಾಷಿಂಗ್ಟನ್‌ನಲ್ಲಿ ಶುಕ್ರವಾರ ನಡೆಯಿತು. ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳು ಈ ರೀತಿ ಅಗ್ರ ಸ್ಥಾನ ಪಡೆದಿರುವುದು ಇದು ಸತತ ಎರಡನೆಯ ಬಾರಿಯಾಗಿದೆ.

ಕಳೆದ ವರ್ಷ ಶ್ರೀರಾಮ್ ಹತ್ವಾರ್ ಹಾಗೂ ಅನ್ಸೂನ್ ಸುಜೋ ಜಂಟಿಯಾಗಿ ಪ್ರಶಸ್ತಿ ಪಡೆದಿದ್ದರು.ಭಾರತೀಯ ವಿದ್ಯಾರ್ಥಿಗಳು ಈ ಪ್ರಶಸ್ತಿಯನ್ನು ಪಡೆದಿರುವುದು ಇದು ಸತತ ಎಂಟನೆಯ ಬಾರಿಯಾಗಿದೆ ಮತ್ತು ಕಳೆದ 16 ವರ್ಷಗಳ ಅವಧಿಯಲ್ಲಿ ಇದು 13ನೆ ಬಾರಿಯಾಗಿದೆ.

ಈ ವರ್ಷದ 49 ಮಂದಿ ಅಂತಿಮ ಸ್ಪರ್ಧಿಗಳಲ್ಲಿ 25 ಮಂದಿ ಭಾರತೀಯ ಮೂಲದವರಾಗಿದ್ದರು. ಕಠಿಣ ಪರಿಶ್ರಮ ನನ್ನ ಸಾಧನೆಗೆ ಕಾರಣವಾಯಿತು. ಕೊನೆಯ ಸುತ್ತಿನ ಪ್ರಾರಂಭದಲ್ಲಿ ನಾನು ಸ್ವಲ್ಪ ಮಟ್ಟಿಗೆ ಆತ್ಮ ವಿಶ್ವಾಸ ಕಳೆದುಕೊಂಡಿದ್ದೆ. ಕೊನೆಕೊನೆಗೆ ಸ್ಪರ್ಧೆಯಲ್ಲಿ ಗಂಭೀರವಾದೆ.

Write A Comment