ರಾಷ್ಟ್ರೀಯ

ಕಾರು ಚಾಲನೆ ಮಾಡುವಾಗ ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ; ಇಂತಹ ಕಾನೂನು ಭಾರತದಲ್ಲಿ ಇದೆಯೇ?

Pinterest LinkedIn Tumblr

drive

ಮೀರತ್ (ಡಿಎಚ್‌): ನೀವು ಹೆಲ್ಮೆಟ್‌ ಧರಿಸಿ ಕಾರು ಚಾಲನೆ ಮಾಡುವವರನ್ನು ನೋಡಿರುವಿರಾ? ಇಂತಹ ಕಾನೂನು ಭಾರತದಲ್ಲಿ ಇದೆಯೇ? ಆದರೆ ಮೀರತ್‌ನಲ್ಲಿ ಈ ಕಾನೂನು ಇದೆ?

ಕಾರು ಚಾಲನೆ ಮಾಡುವಾಗ ಹೆಲ್ಮೆಟ್‌ ಧರಿಸದಿದ್ದಕ್ಕೆ ಸಂಚಾರಿ ಪೊಲೀಸರೊಬ್ಬರು ದಂಡ ಹಾಕಿದ ಘಟನೆ ಮೀರತ್‌ನಲ್ಲಿ ನಡೆದಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಶೈಲೇಂದ್ರ ಸಿಂಗ್‌ ತಮ್ಮ ಕಾರಿನಲ್ಲಿ ನಾಲ್ಕು ವರ್ಷದ ಮಗುವನ್ನು ಆಸ್ಪತ್ರಗೆ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರನ್ನು ತಡೆದ ಟ್ರಾಫಿಕ್‌ ಪೊಲೀಸ್‌ ಶಿವರಾಜ್‌ ಸಿಂಗ್‌ ಕಾರಿನ ದಾಖಲೆ ಪತ್ರಗಳನ್ನು ಕೇಳಿದ್ದಾರೆ. ಶೈಲೆಂದ್ರ ಸಿಂಗ್‌ ಡ್ರೈವಿಂಗ್‌ ಲೈಸೆನ್ಸ್‌ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ. ಅವುಗಳನ್ನು ಪರೀಶಿಲಿಸಿದ ಬಳಿಕ ನೀವು ಕಾರು ಚಾಲನೆ ಮಾಡುವಾಗ ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ದಂಡ ಹಾಕಿದ್ದಾರೆ. ಶೈಲೆಂದ್ರ ಸಿಂಗ್‌ ದಂಡ ಕಟ್ಟಿ ರಶೀದಿ ಪಡೆದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Write A Comment