ರಾಷ್ಟ್ರೀಯ

ಮೂವರು ಪುತ್ರಿಯರಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ

Pinterest LinkedIn Tumblr

Suicide-by-Hang

ಪಳನಿ(ತ.ನಾ), ಮೇ 27-ಮೂವರು ಮಕ್ಕಳಿಗೆ ವಿಷವುಣಿಸಿ ಹತ್ಯೆ ಮಾಡಿ ನಂತರ ದಂಪತಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಮಿಳುನಾಡಿನ ಪಳನಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.  ತಂದೆ ಮುರುಗೇಶನ್ (47), ಪತ್ನಿ  ಹಾಗೂ ತಮ್ಮ 18 ವರ್ಷ, 16 ವರ್ಷ ಹಾಗೂ 14 ವರ್ಷದ ಮೂವರು

ಪುತ್ರಿಯರಿಗೆ ವಿಷ ಮಿಶ್ರಿತ ಆಹಾರ ನೀಡಿ ಹತ್ಯೆ ಮಾಡಿದ್ದಾರೆ. ನಂತರ ಮನೆಯ ಜಂತೆಗೆ ನೇಣು ಬಿಗಿದುಕೊಂಡು ತಾವೂ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ಮಗಳಿಗೆ ಕಣ್ಣಿನ ಸಂಬಂಧಿ ಕಾಯಿಲೆಯಿದ್ದು, ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಇದರಿಂದ ನೊಂದಿದ್ದ ಅಪ್ಪ-ಅಮ್ಮ ಈ ನಿರ್ಧಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment