ರಾಷ್ಟ್ರೀಯ

ಫೇಸ್ ಬುಕ್ ಮಿಸ್ ಮಾಡ್ಕೊಂಡ್ರೆ ಚಡಪಡಿಸುತ್ತಿರಾ ? ಹಾಗಾದ್ರೆ ಇದನ್ನು ಓದಿ

Pinterest LinkedIn Tumblr

5213social-networking

ನವದೆಹಲಿ: ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಮೊದಲಾದವುಗಳನ್ನು ಅತಿಯಾಗಿ ಬಳಸುತ್ತಿರುವವರು ಯಾವತ್ತಾದರೂ ಒಂದು ದಿನ ಅವುಗಳಿಂದ ದೂರವುಳಿದ ವೇಳೆ ಚಡಪಡಿಸುತ್ತಿದ್ದರೆ ಅದು ಒಳ್ಳೆಯ ಲಕ್ಷಣವಲ್ಲವೆಂದು ತಜ್ಞರು ಹೇಳಿದ್ದಾರೆ.

ಈ ಕುರಿತು ಅಧ್ಯಯನ ನಡೆಸಿರುವ ನವದೆಹಲಿ ಮೂಲದ ತಜ್ಞರು, ವ್ಯಕ್ತಿಯೊಬ್ಬನಲ್ಲಿ ಈ ರೀತಿಯ ಚಡಪಡಿಕೆ ಕಾಣುತ್ತಿದೆ ಎಂದರೆ ಆತನಿಗೆ ಮಾನಸಿಕ ಕಾಯಿಲೆ ಇದೆ ಎಂದರ್ಥ ಎಂದು ಹೇಳಿದ್ದಾರೆ. ಈ ಕಾಯಿಲೆಗೆ ‘ಫೋಮಾ'(FOMO) ಅರ್ಥಾತ್ ‘ಫಿಯರ್ ಆಫ್ ಮಿಸ್ಸಿಂಗ್ ಔಟ್’ ಎಂಬ ಹೆಸರನ್ನೂ ತಿಳಿಸಿದ್ದಾರೆ.

ಹಾಗಾಗಿ ಸಾಮಾಜಿಕ ಜಾಲ ತಾಣಗಳ ಗೀಳಿನಿಂದ ಯುವ ಜನತೆ ಹೊರ ಬರದಿದ್ದರೆ ಆಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆಯನ್ನೂ ಈ ತಜ್ಞರು ನೀಡಿದ್ದಾರೆ. ಯಾವುದರ ಬಳಕೆಯೂ ಅತಿಯಾಗಿರಬಾರದು ಎಂಬುದು ಇವರ ಸಲಹೆ. ‘ಅತಿಯಾದರೆ ಅಜೀರ್ಣ’ ಎಂಬುದನ್ನು ಇದಕ್ಕೆ ಅನ್ವಯಿಸಬಹುದೇನೋ.

Write A Comment