ರಾಷ್ಟ್ರೀಯ

ಬಾಂಬ್ ಸ್ಫೋಟ, ಟಿಎಂಸಿ ನಾಯಕನ ಪತ್ನಿ ಸಾವು

Pinterest LinkedIn Tumblr

blast

ಸುರಿ: ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯಲ್ಲಿ ಟಿಎಂಸಿ ನಾಯಕ ಬುರೊ ಹನ್ಸಡಾ(45) ಮನೆಯಲ್ಲಿ ಭಾನುವಾರ ಮುಂಜಾನೆ ಬಾಂಬ್ ಸ್ಫೋಟಗೊಂಡು ಅವರ ಪತ್ನಿ ಮೃತಪಟ್ಟಿದ್ದಾರೆ.

ಟಿಎಂಸಿ ನಾಯಕನಿಗೆ ಗಾಯಗಳಾಗಿದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ”ಬೀರ್‌ಭೂಮ್ ಜಿಲ್ಲೆಯ ಬಿಲಾತಿ ಗ್ರಾಮದ ಹನ್ಸಡಾ ನಿವಾಸದಲ್ಲಿ ಬೆಳಗಿನ ಜಾವ 3 ಗಂಟೆಗೆ ಬಾಂಬ್ ಸ್ಫೋಟಿಸಿದೆ. ಅವರ ಪತ್ನಿ ಚುರ್ಕಿ ಹನ್ಸಡಾ(37) ಸ್ಥಳದಲ್ಲೇ ಮೃತಪಟ್ಟಿದ್ದಾರೆ,” ಎಂದು ಪೊಲೀಸ್ ವರಿಷ್ಠ ಮುಕೇಶ್ ಕುಮಾರ್ ತಿಳಿಸಿದ್ದಾರೆ.

”ದುಷ್ಕರ್ಮಿಗಳು ನಮ್ಮ ಮನೆ ಮೇಲೆ ಬಾಂಬ್ ಎಸೆದಿದ್ದಾರೆ,” ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹನ್ಸಡಾ ಹೇಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿಂಸಾ ರಾಜಕೀಯ ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿ ವ್ಯಾಪಿಸುತ್ತಿದೆ. ನಾಲ್ಕು ದಿನಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಚ್ಚಾ ಬಾಂಬ್ ಕಾದಾಟ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ನೆಲೆಕಂಡುಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದು, ಈ ಪಕ್ಷ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಸಂಘರ್ಷಗಳೂ ಹೆಚ್ಚುತ್ತಿವೆ.

Write A Comment