ರಾಷ್ಟ್ರೀಯ

ಐರ‌್ಲೆಂಡ್ನಲ್ಲಿನ್ನು ಗಂಡಿಗೆ ಗಂಡೇ ಗಂಡ!!

Pinterest LinkedIn Tumblr

6192britain_gay_marriage_AP516716349258ಸಲಿಂಗಗಳ ವಿವಾಹಕ್ಕೆ ಕ್ಯಾಥೊಲಿಕ್ ಸಂಪ್ರದಾಯಸ್ಥ ದೇಶವಾದ ಐರ‌್ಲೆಂಡ್ ಕಾನೂನು ಬದ್ದಗೊಳಿಸಿದ್ದು ಇನ್ನು ಮುಂದೆ  ಗಂಡು ಗಂಡನ್ನೇ  ಮದುವೆಯಾಗುವ ‘ಸುವರ್ಣಾವಕಾಶ’ ಲಭಿಸಲಿದೆ.

ಸಲಿಂಗ ವಿವಾಹ ಮತ್ತು ದಾಂಪತ್ಯವನ್ನು ಕಾನೂನು ಬದ್ದಗೊಳಿಸುವ ಕುರಿತಂತೆ ಶನಿವಾರ ಜನಮತ ಗಣನೆ ನಡೆದಿದ್ದು ಇದಕ್ಕೆ ಜನರು ಭಾರೀ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ್ದು ಸಮಾನ ಲಿಂಗಿಗಳ ನಡುವಿನ ಲೈಂಗಿಕ ಚಟುವಟಿಕೆಯನ್ನು ಅಪರಾಧಮುಕ್ತಗೊಳಿಸಿದ ಒಂದು ದಶಕದ ಬಳಿಕ, ಇದನ್ನು ಕಾನೂನುಬದ್ಧಗೊಳಿಸಿರುವುದು ದೇಶದ ಜನರು ಪ್ರಬುದ್ಧರಾಗುತ್ತಿರುವುದಕ್ಕೆ ಸಾಕ್ಷಿ ಎಂದು ಸಮಾನತೆ ಸಚಿವ ಅಡನ್ ಒರಿಯೋರ್ಡನ್  ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗೆಗೆ ಮಾತನಾಡಿರುವ ಈ ಹಿಂದಷ್ಟೇ ತಾವೂ ಸಹ ಸಲಿಂಗಿ ಎಂದು ಘೋಷಿಸಿಕೊಂಡಿದ್ದ ಆರೋಗ್ಯ ಸಚಿವ ಲಿಯೊ ವರಾಡ್ಕರ್ ಇದೊಂದು ಸಾಮಾಜಿಕ ಕ್ರಾಂತಿಯಾಗಿದ್ದು  ಈ ಮೂಲಕ ಜಗತ್ತಿಗೆ ಉತ್ತಮ ಸಂದೇಶವನ್ನು ಐರಿಶ್ ಪ್ರಜೆಗಳು ರವಾನಿಸಿದ್ದಾರೆ ಎಂದು ಹೇಳಿದ್ದಾರೆ.

ಸಂಪ್ರದಾಯಸ್ಥ ಕ್ಯಾಥೊಲಿಕ್ ಕ್ರೈಸ್ತರು ಬಹುಸಂಖ್ಯಾತರಾಗಿರುವ ಐರ‌್ಲೆಂಡ್‌ನಲ್ಲಿ ಸಮಾನ ಲಿಂಗಿಗಳ ನಡುವಿನ ಲೈಂಗಿಕ ಚಟುವಟಿಕೆಯನ್ನು ಮಹಾಪಾಪ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಸಲಿಂಗಿಗಳ ಹಕ್ಕುಗಳ ಪರವಾಗಿ 1970ರಲ್ಲಿ ಹೋರಾಟ ಆರಂಭಗೊಂಡಿತ್ತಲ್ಲದೇ ಈ ಸಂಬಂಧ 1983ರಲ್ಲಿ  ಐರ‌್ಲೆಂಡ್‌ನ ಸುಪ್ರೀಂ ಕೋರ್ಟ್ ಇದೊಂದು ಅನೈತಿಕ ಚಟುವಟಿಕೆಯಾಗಿದ್ದು, ಖಿನ್ನತೆ ಮತ್ತು ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿತ್ತು.

ಆದರೆ, ಬಹಳಷ್ಟು ಕಾನೂನು ಹೋರಾಟ ಮತ್ತು ಸಾಮಾಜಿಕ ಆಂದೋಲನದ ಬಳಿಕ 10 ವರ್ಷಗಳ ಹಿಂದೆ ಸಲಿಂಗ ಲೈಂಗಿಕತೆಯನ್ನು ಅಪರಾಧವಲ್ಲ ಎಂದು ಸಾರಲಾಗಿತ್ತು. ಇದೀಗ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯೂ ದೊರೆಯಲಿದ್ದು ಗಂಡಿಗೆ ಗಂಡೇ ಗಂಡನಾಗಲಿದ್ದಾನೆ.

Write A Comment