ರಾಷ್ಟ್ರೀಯ

ಗೂಗಲ್ ಮ್ಯಾಪ್‌ನಲ್ಲಿ ರೈಲುಗಳ ವೇಳಾಪಟ್ಟಿ

Pinterest LinkedIn Tumblr

Rail-Budget-2013

ಹೊಸದಿಲ್ಲಿ : ಭಾರತೀಯ ರೈಲ್ವೆಯ 12 ಸಾವಿರ ರೈಲುಗಳ ವೇಳಾಪಟ್ಟಿ ಮತ್ತು ಬೆಂಗಳೂರು ಸೇರಿದಂತೆ 8 ನಗರಗಳ ಸಾರ್ವಜನಿಕ ಸಾರಿಗೆ (ಬಸ್ಸು, ಮೆಟ್ರೊ)ಕುರಿತ ಪರಿಷ್ಕೃತ ಮಾಹಿತಿಗಳು ಗೂಗಲ್ ಟ್ರಾನ್ಸಿಟ್‌ನಲ್ಲಿ ಲಭ್ಯವಾಗಲಿವೆ.

ಅಹಮದಾಬಾದ್, ಚೆನ್ನೈ, ಹೈದರಾಬಾದ್, ಕೋಲ್ಕೊತಾ, ಮುಂಬಯಿ, ದಿಲ್ಲಿ, ಪುಣೆ ನಗರಗಳ ಬಸ್ ಮತ್ತು ಮೆಟ್ರೊ ಮಾರ್ಗಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೂಡ ಒದಗಿಸುವುದಾಗಿ ಕಂಪೆನಿ ಹೇಳಿದೆ.

ಈ ಗೂಗಲ್ ಟ್ರಾನ್ಸಿಟ್ ಜನರಿಗೆ ಸಾರ್ವಜನಿಕ ಸಾರಿಗೆ ಮೂಲಕ ತ್ವರಿತವಾಗಿ ಮತ್ತು ಸರಳವಾಗಿ ಪ್ರಯಾಣವನ್ನು ಯೋಜಿಸಿಕೊಳ್ಳಲು ನೆರವಾಗಲಿದೆ. ಜಗತ್ತಿನಾದ್ಯಂತ ಇದು ಒದಗಿಸುವ ಮಾಹಿತಿ ಸಮಗ್ರ ಮತ್ತು ಖಚಿತವಾಗಿದ್ದು ಬಹಳಷ್ಟು ಪ್ರಯೋಜನಕಾರಿ ಎಂದು ಕಂಪೆನಿಯ ನಿರ್ದೇಶಕ ಸುರೆನ್ ರುಹೆಲಾ ಹೇಳಿದ್ದಾರೆ.

ಪ್ರಸಕ್ತ ಗೂಗಲ್ ಮ್ಯಾಪ್‌ನಲ್ಲಿ ನ್ಯೂಯಾರ್ಕ್, ಲಂಡನ್, ಟೋಕಿಯೊ, ಸಿಡ್ನಿ ಸೇರಿದಂತೆ ಜಗತ್ತಿನ 2,800 ನಗರಗಳ ಹತ್ತು ಲಕ್ಷ ನಿಲ್ದಾಣಗಳ ಮಾಹಿತಿಗಳಿವೆ.

Write A Comment