ಮೀರತ್, ಮೇ 6: ಹೆಸರು ಧರ್ಮೇಂದರ್ಸಿಂಗ್, ವಯಸ್ಸು 35. ಸ್ಥಳ ಉತ್ತರ ಪ್ರದೇಶದ ಪ್ರತಾಪಗಢ. ಎತ್ತರ ಬರೋಬ್ಬರಿ 8 ಅಡಿ 1 ಇಂಚು. ಸದ್ಯಕ್ಕೆ ಭಾರತದ 125 ಕೋಟಿ ಜನರಲ್ಲಿ ಅತಿ ಎತ್ತರದ ಈ ಸಿಂಗ್ ಹಿಂದಿ ಸಾಹಿತ್ಯದಲ್ಲಿ ಎಂಎ ಪದವೀಧರ. ಅವನ ಈ ಎತ್ತರವೇ ಅವನ ಭವಿಷ್ಯಕ್ಕೆ ಶಾಪವಾಯಿತು. ತನ್ನ ಎಂಎ ಪ್ರಮಾಣ ಪತ್ರ ಹಿಡಿದು ಎಲ್ಲೆಲ್ಲೋ ಅಲೆದಾಡಿದ ಇಲ್ಲ.. ನೀನು ಎತ್ತರ ಅಂದರು, ಕೆಲಸ ಕೊಡಲಿಲ್ಲ.
ಜೀವನೋಪಾಯಕ್ಕಾಗಿ ಸಿಂಗ್ ಈಗ ಏನು ಮಾಡುತ್ತಿದ್ದಾನೆ ಗೊತ್ತೆ.. ಜಾತ್ರೆಗಳಲ್ಲಿ , ಉತ್ಸವಗಳಲ್ಲಿ ಭಾಗವಹಿಸುತ್ತಾನೆ. ಅಲ್ಲಿ ಜನ ಇವನನ್ನು ವಿಚಿತ್ರ ಪ್ರಾಣಿಯಂತೆ ನೋಡುತ್ತಾರೆ. ಅವನೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಅದಕ್ಕೆ 10 ರೂ. ವಸೂಲು ಮಾಡತ್ತಾನೆ ಸಿಂಗ್. ಅದೇ ಅವನಿಗೆ ಅನ್ನ. ತನ್ನ ಅಸಹಜ ಎತ್ತರದಿಂದಾದ ಕಷ್ಟವನ್ನು ಆ ಎತ್ತರದಿಂದಲೇ ಪರಿಹರಿಸಿಕೊಳ್ಳುವ ಸೂತ್ರ ಕಂಡುಕೊಂಡಿದ್ದಾನೆ.
ಮಾಸ್ಟರ್ ಡಿಗ್ರಿಯಿಂದ ಆಗದ ಕೆಲಸಕ್ಕೆ ಮಾಸ್ಟರ್ ಮಾತ್ರ ನೆರವಾಗಲಿದೆ. ಈ ಪ್ರದರ್ಶನಗಳು ದೊರಕಿಸಿಕೊಡುವ ಪುಡಿಗಾಸಿನಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ಈ ಮಾಸ್ಟರ್ ಸಿಂಗ್ ಬಗ್ಗೆ ಅದೇಕೋ ಉತ್ತರ ಪ್ರದೇಶ ಸರ್ಕಾರ ಭಾರೀ ಕಠಿಣ ನಿಲುವು ತಳೆದಂತಿದೆ. ಅದೇ ಧರ್ಮೇಂದರ್ಸಿಂಗ್ ಸಂಕಟ. ತಂದೆ ಸುರೇಂದ್ರ ಪ್ರತಾಪ್ಸಿಂಗ್ 6 ಅಡಿ ಇದ್ದು ಬಿಡಿಒ ಆಗಿದ್ದಾರೆ.
8 ಅಡಿ 1 ಇಂಚು ಉದ್ದ ಇರುವ ಸಿಂಗ್ ಅದಕ್ಕೆ ಸರಿಯಾಗಿ 100 ಕೆಜಿ ತೂಗುತ್ತಾನೆ. ಅದಕ್ಕೇ ಡಯಟ್ ಮಾಡುತ್ತಿದ್ದಾನೆ. ಬ್ರೇಕ್ಫಾಸ್ಟ್ಗೆ 1 ಲೀಟರ್ ಹಾಲು, 2 ಸೇಬು, ನಾಲ್ಕು ಮೊಟ್ಟೆ, ಮಧ್ಯಾಹ್ನ ಲಂಚ್ಗೆ ದಾಲ್-ಚಾವಲ್, ರೋಟಿ-ಸಬ್ಜಿ ಮತ್ತು ಸಲಾಡ್. ಸಂಜೆಗೆ ಲೈಟ್ ಆಗಿ ಸಬ್ಜಿ-ರೋಟಿ ಹಾಗೂ ಮೊಸರು, ರಾತ್ರಿಗೆ ಪನ್ನೀರ್. ಇವು ಪ್ರಿಯವಾದ ಆಹಾರಗಳು.
