ಮನೋರಂಜನೆ

ಹಿಟ್ ಆಂಡ್ ರನ್ ಕೇಸ್: ನಟ ಸಲ್ಮಾನ್ ಖಾನ್ ಗೆ ಮಧ್ಯಂತರ ಜಾಮೀನು

Pinterest LinkedIn Tumblr

salman

ಮುಂಬೈ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್‍ನಿಂದ 5 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಲ್ಮಾನ್ ಖಾನ್‍ಗೆ ಬಾಂಬೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಮಾನ್ ಪರ ವಕೀಲರು ಬುಧವಾರ ಸಂಜೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸಲ್ಮಾನ್ ಖಾನ್‍ಗೆ 2 ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಸಲ್ಮಾನ್ ಖಾನ್‍ಗೆ ಅನಾರೋಗ್ಯ ಇದೆ. ಹೀಗಾಗಿ ಜಾಮೀನು ನೀಡಬೇಕೆಂದು ಸಲ್ಮಾನ್ ಪರ ವಕೀಲ ಹರೀಶ್ ಸಾಳ್ವೆ ಪೀಠದಲ್ಲಿ ಮನವಿ ಮಾಡಿದರು. ವಕೀಲರ ಮನವಿಯನ್ನು ಪುರಸ್ಕರಿಸಿದ ಮುಖ್ಯನಾಯಮೂರ್ತಿ ಅಭಯ್ ತಿಪ್ಸೆ ಪೀಠ 2 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಮೇಲಿನ ಎಲ್ಲ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ಬುಧವಾರ ಮಧ್ಯಾಹ್ನ 25 ಸಾವಿರ ದಂಡ ಮತ್ತು 10 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಡಿ.ಡಬ್ಲ್ಯೂ.ದೇಶಪಾಂಡೆ ಬೆಳಗ್ಗೆ 11.15ಕ್ಕೆ ಸಲ್ಮಾನ್ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು. ಬಳಿಕ ಕೋರ್ಟ್‍ನಲ್ಲಿ ಶಿಕ್ಷೆಯ ಪ್ರಮಾಣ ನೀಡುವ ಬಗ್ಗೆ ವಾದ ಪ್ರತಿವಾದ ನಡೆದು ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ನ್ಯಾಯಧೀಶರು ಪ್ರಕಟಿಸಿದ್ದರು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲು ಪರ ವಕೀಲರು ಬಾಂಬೆ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Write A Comment