ರಾಷ್ಟ್ರೀಯ

ಪತ್ನಿಯ ಮೂಗು ಕಚ್ಚಿ ಜೈಲು ಸೇರಿದ ಭೂಪ !

Pinterest LinkedIn Tumblr

4705jailಕೆಲವೊಮ್ಮೆ ಮದ್ಯದ ಅಮಲಿನಲ್ಲಿ ಮಾಡುವ ತಪ್ಪು ಎಂತವರನ್ನೂ ಜೈಲಿಗೆ ಕಳುಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಉದಾಹರಣೆಯೆಂಬಂತೆ ಕುಡಿದು ಮನೆಗೆ ಬಂದ ಪತಿ ಮಹಾಶಯನೊಬ್ಬ ಹೆಂಡತಿಯ ಮೂಗು ಕಚ್ಚಿ ಜೈಲುಪಾಲಾಗಿದ್ದಾನೆ.

ಹೌದು. 2011ರ ಮೇ 15 ರಂದು ಮದ್ಯದ ಅಮಲಿನಲ್ಲಿದ್ದ ಈ ಪತಿ ಮಹಾಶಯ ಎಂದಿನಂತೆ ದೆಹಲಿಯಲ್ಲಿರುವ ತನ್ನ ಮನೆಗೆ ಬಂದಿದ್ದಾನೆ. ಈ ಸಮಯದಲ್ಲಿ ಪತ್ನಿಯೊಂದಿಗೆ ಜಗಳ ಕಾದ ಈ ಭೂಪ  ಸಿಟ್ಟಿನ  ಭರದಲ್ಲಿ ಆಕೆಯ ಮೂಗು ಕಚ್ಚಿ ಗಾಯಗೊಳಿಸಿದ್ದ ಎನ್ನಲಾಗಿದೆ.

ಪತಿಯ ಈ ವರ್ತನೆಗೆ ಬೇಸತ್ತಿದ್ದ ಪತ್ನಿ ದೂರು ದಾಖಲಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪತ್ನಿಯ ಹೇಳಿಕೆ ಮತ್ತು ವೈದ್ಯಕೀಯ ವರದಿಗಳ ಆಧಾರವನ್ನಾಗಿಟ್ಟುಕೊಂಡು ಆರೋಪಿ ಪತಿಗೆ  ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಮೇಲ್ಮನವಿ ಸಲ್ಲಿಸಿದ್ದ ಎನ್ನಲಾಗಿದ್ದು ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕೆಳನ್ಯಾಯಾಲಯ ನೀಡಿದ ತೀರ್ಪು ಸಮಂಜಸವಾಗಿದೆ ಎನ್ನುವ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

Write A Comment